ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ 17ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

0

 

 

ಶ್ರೀ ಭಗವತಿ ಯುವ ಸೇವಾ ಸಂಘ
ಬೂಡು,ಕೇರ್ಪಳ,ಕುರುಂಜಿಗುಡ್ಡೆ ಇದರ ವತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘ ಸುಳ್ಯ ಇದರ ಸಹಕಾರದೊಂದಿಗೆ ಹದಿನೇಳನೆ ವರ್ಷದ ಕೃಷ್ಣಾಷ್ಟಮಿ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ ನಡೆಸಲಾಯಿತು.

 

 

ಕಾರ್ಯಕ್ರಮವನ್ನು
ಪ್ರಭಾಕರ ರೈ ಎಣ್ಮೂರು ಪಟ್ಟೆ ಉದ್ಘಾಟಿಸಿದರು.ಭಗವತಿ ಯುವ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಎಸ್.ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಕ್ರೀಡಾಂಗಣ ಉದ್ಘಾಟನೆ ನೆರವೇರಿಸಿದರು.ಚೆನ್ನಕೇಶವ ದೇವಸ್ಥಾನ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಅಖಿಲ ಭಾರತ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ,ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಮಾತೃ ಸಂಘ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಇದರ ಅಧ್ಯಕ್ಷರಾದ ಚಿದಾನಂದ ಗುಂಡ್ಯಡ್ಕ , ಸುಳ್ಯ ಪೋಲಿಸ್ ಠಾಣೆ ಎ.ಎಸ್.ಐ. ತಾರನಾಥ ಎನ್., ಕೇರ್ಪಳ ಪಯಸ್ವಿನಿ ಯುವಕ ಮಂಡಲ ಅಧ್ಯಕ್ಷ ಲಕ್ಷ್ಮೀಶ ದೇವರಕಳಿಯ ಹಾಗೂ ಬೂಡು ಪ್ರಕೃತಿ ಯುವಕ ಸಂಘ ಕಾರ್ಯದರ್ಶಿ ಪ್ರಕಾಶ್ ಬಿ.ಎಮ್. ಮುಖ್ಯ ಅತಿಥಿಗಳಾಗಿದ್ದರು.ಭಗವತಿ ಯುವ ಸೇವಾ ಸಂಘದ ಗೌರವಾಧ್ಯಕ್ಷ ಬೂಡು ರಾಧಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಾಸುದೇವ ನಾಯಕ್ ಸ್ವಾಗತಿಸಿದರು.ಸುನೀಲ್ ಕೆ.ಸಿ. ವಂದಿಸಿದರು.

ಉದ್ಘಾಟನೆ ಕಾರ್ಯಕ್ರಮ ಬಳಿಕ ಮುದ್ದು ಮಕ್ಕಳ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಬಳಿಕ ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.