ಅರಂತೋಡು :  ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ

0

ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ 75ನೇ ಸ್ವಾತಂತ್ರ್ಯ ಆಮೃತ ಮಹೋತ್ಸವದ ಪ್ರಯುಕ್ತ ಅಯೋಜಿಸಿದ ಚಿತ್ರ ಕಲಾ ಸ್ಪರ್ಧೆ ಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಹಾಲ್ ನಲ್ಲಿ ಆ.21 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ ವಹಿಸಿದರು.ವೇದಿಕೆಯಲ್ಲಿ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕರಾದ ಸಅದ್ ಫೈಝಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹೊಮ್ಮಲು ಸಮಸ್ತ ಪ್ರೋತ್ಸಾಹ ವನ್ನು ನೀಡುತ್ತಾಬಂದಿದೆ.ಇದೀಗ ವಿಧ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ವಿತ್ತರಿಸಲು ಬೇಕಾಗಿ ಪ್ರತಿ ಸಮಸ್ತ ಮದರಸಗಳಲ್ಲಿ ಸಮಸ್ತ ಕೇರಳ ಸುನ್ನಿ ಬಾಲ ವೇದಿಕೆ ಎಂದು ನಾಮಕರಣ ಮಾಡಿ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸುವ ಕಾರ್ಯವನ್ನು ಮಾಡುತ್ತಾ ಬಂದಿರುತ್ತಾರೆ.ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ಮಾತನಾಡಿ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಒಳ್ಳೆಯ ಪ್ರತಿಭಾವಂತರಾಗಿ ಗುರುತಿಸಿಕೊಳ್ಳುವುದಕ್ಕಾಗಿ ಎಸ್ ಕೆ ಎಸ್ ಎಸ್ ಎಫ್ ಇತಂಹ ಕಾರ್ಯಕ್ರಮ ವನ್ನು ನಡೆಸುತ್ತಾ ಬಂದಿರುತ್ತದೆ .

ಮದರಸಗಳ ಲ್ಲಿ ವಾರಕ್ಕೊಮ್ಮೆ ಇತಂಹ ಕಾರ್ಯಕ್ರಮ ಅಯೋಜಿಸುವುದು ಮದರಸ ಮ್ಯಾನೇಜ್‌ಮೆಂಟ್ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ಹರಿ,ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ,ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಅಧ್ಯಕ್ಷ ಅಶೀಕ್ ಕುಕ್ಕುಂಬಳ ಶುಭ ಹಾರೈಸಿದರು.ವೇದಿಕೆಯಲ್ಲಿ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ನಿರ್ದೇಶಕರಾದ ಜುಬೈರ್ ,ಮುಜೀಬ್,ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಕಾರ್ಯದರ್ಶಿ ಮುಝಮ್ಮಿಲ್,ಅರಂತೋಡು ವಿಖಾಯ ಕಾರ್ಯದರ್ಶಿ ಸಮದ್ ಸಣ್ಣಮನೆ,ಎಸ್ಕೆ ಎಸ್ ಬಿವಿ ಅಧ್ಯಕ್ಷ ಅಜರುದ್ದೀನ್ ಮುಂತಾದವರು ಉಪಸ್ಥಿತರಿದ್ದರು .ಬಹುಮಾನವನ್ನು ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ಪ್ರಯೋಜಕರಾಗಿ ನೀಡಿದರು. ಮದರಸ ವಿಧ್ಯಾರ್ಥಿ ಮುಝಮ್ಮಿಲ್ ಕಿರಾ ಅತ್ ಪಠಿಸಿದರು.ಎಸ್ ಕೆ ಎಸ್ ಬಿವಿ ಕಾರ್ಯದರ್ಶಿ ಅಂಸಾಫ್ ಸ್ವಾಗತಿಸಿ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸಅದ್ ಫೈಝಿ ಕಾರ್ಯಕ್ರಮ ನಿರೂಪಿಸಿದರು.