ಮಾವಂಜಿ ಪಚ್ಚೇಂಬೀಡು ತರವಾಡು ಪುನರ್‌ನಿರ್ಮಾಣ ಸಮಿತಿ ರಚನೆ  

0

 

 

ಮಾವಂಜಿ ಪಚ್ಚೇಂಬೀಡು ತರವಾಡು ಪುನರ್‌ನಿರ್ಮಾಣ ಸಮಿತಿ ಕೊಂಗೋಡಿ ಕುದ್ಪಾಜೆ ಸುಳ್ಯ ಇದರ ಸಮಿತಿ ರಚನೆಯು ಆ.17 ರಂದು ಕುದ್ಪಾಜೆ ಶಶಿಕಲಾರವರ ಮನೆಯಲ್ಲಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಮಣಿಯಾಣಿ ಅಡೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆಡಳಿತ ಕಾರ್‍ಯದರ್ಶಿಯಾಗಿ ನಿತೀಶ್ ಹೋಟೆಲ್‌ನ ಮಾಲಕ ಸುದಾಮ ಬೂಡುಮಕ್ಕಿ, ಸಮಿತಿ ಸಲಹೆಗಾರರಾಗಿ ಎ.ಕೆ.ಮಣಿಯಾಣಿ ಬೆಳ್ಳಾರೆ, ಗೋಪಾಲ ಮಣಿಯಾಣಿ ಕುದ್ಪಾಜೆ, ರಾಮಚಂದ್ರ ಯದುಗಿರಿ ಮಂಡೆಕೋಲು ಇವರನ್ನು ಆರಿಸಲಾಗಿದೆ. ಉಪಾಧ್ಯಕ್ಷರಾಗಿ ಶ್ರೀಮತಿ ಶೀಲಾವತಿ ಕುದ್ಪಾಜೆ, ಕಾರ್‍ಯದರ್ಶಿಯಾಗಿ ಸುಬ್ರಹ್ಮಣ್ಯ ಮಾಸ್ತರ್ ಕುದ್ಪಾಜೆ, ಜೊತೆ ಕಾರ್‍ಯದರ್ಶಿಯಾಗಿ ಪ್ರಶಾಂತ್ ಕುದ್ಪಾಜೆ, ಭಧ್ರತಾಕೋಶಾಧಿಕಾರಿಯಾಗಿ ಶಶಿಕಲಾ ಕುದ್ಪಾಜೆ, ಕೋಶಾಧಿಕಾರಿಯಾಗಿ ಶ್ರೀಮತಿ ಸುಮಾ ಹರೀಶ ನಾರಂಪಾಡಿ ಹಾಗೂ 31 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು ಅಲ್ಲದೆ ಪ್ರತಿ ತಿಂಗಳ ಸಂಕ್ರಮಣದಂದು ಸಭೆ ಸೇರಿ ಸಮುದಾಯದ ಪ್ರಮುಖರನ್ನು ಸಂಪರ್ಕಿಸಿ ಕಾರ್‍ಯಯೋಜನೆಗಳನ್ನು ರೂಪಿಸುವುದೆಂದು ತೀರ್ಮಾನಿಸಲಾಯಿತು.