ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕದ ಮಾಸಿಕ ಸಭೆ

0

ಕರ್ನಾಟಕ ರಾಜ್ಯ ರೈತಸಂಘ ಸುಳ್ಯ ತಾಲೂಕು ಘಟಕದ ಮಾಸಿಕ ಸಭೆಯು ಆ. 2೦ ರಂದು ಸುಳ್ಯ ಎ.ಪಿ.ಎಮ್.ಸಿ.ಸಭಾಂಗಣದಲ್ಲಿ ನಡೆಯಿತು. ತಾಲೂಕು ಅಧ್ಯಕ್ಷ ಲೋಲಾಜಾಕ್ಷ ಗೌಡ ಭೂತಕಲ್ಲುರವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ದಕ್ಷಿಣ ಕನ್ನಡ ಜಿಲ್ಲಾ ಯುವ ರೈತ ಘಟಕದ ಜಿಲ್ಲಾಧ್ಯಕ್ಷರಾದ ಆದಿತ್ಯ ನಾರಾಯಣ ಕೊಲ್ಲಾಜೆ, ಲೇಖಕರು ಚಿಂತಕ ಹಿಮಕರರವರು ಉಪಸ್ಥಿತರಿದ್ದರು. ಜಿಲ್ಲೆಯ ಅಡಿಕೆ ಎಲೆ ಹಳದಿ ರೋಗ ಸಂತ್ರಸ್ಥರ ಸ್ವಯಂಘೋಷಿತ ಅರ್ಜಿ ಸಂಗ್ರಹಣೆ ಹಾಗು ತಾಲೂಕಿನ ರೈತರ ಪ್ರಮುಖ ಸಮಸ್ಯೆಗಳ ಪರಿಹಾರದ ಬಗ್ಗೆ ಸರಕಾರದ ಗಮನ ಸೆಳೆಯುವ ಮತ್ತು ೧೮೩೭ ರ ಕೆನರ ರೈತ ಚಳುವಳಿಯ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿಯನ್ನು ಸ್ವಾಗತಿಸುವ ಕುರಿತು ಪೂರ್ವ ತಯಾರಿಯ ಕುರಿತು ಸಮಾಲೋಚನೆ ನಡೆಸಲಾಯಿತು.
ಯುವ ರೈತ ಘಟಕದ ಸುಳ್ಯ ತಾಲೂಕು ಘಟಕ ರಚನೆಯ ಬಗ್ಗೆ ಪೂರಕವಾಗಿ ಚರ್ಚಿಸಿ ಯುವ ಜನತೆಯನ್ನು ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಕ್ರಿಯಾವಾಗಿ ತೊಡಗಿಸಲು ಉತ್ತೇಜಿಸಿ ಪೂಕರ ಮಾಹಿತಿ ಕಾರ್ಯಗಾರಗಳನ್ನು ನೀಡುವುದರೊಂದಿಗೆ ಸರಕಾರದ ಇಲಾಖೆಗಳ ಮೂಲಕ ಸಹಾಯಧನ ಹಾಗೂ ಯೋಚನೆಗಳನ್ನು ತಲುಪಿಸಲು ಅವರೊಂದಿಗೆ ನಿರಂತರ ಸಹಕಾರ ನೀಡಿ ಕೃಷಿ ಸಂಸೃತಿಯನ್ನು ರಕ್ಷಿಸಿ ಉಳಿಸುವ ನಿರ್ಣಯ ಕೈಗೊಳ್ಳಲಾಯಿತು.
ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಡಿ.ಕೆ.ಶಾಹುಲ್ ಹಮೀದ್ ಕನ್ಯಾನ, ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ, ಜಿಲ್ಲಾ ಯುವ ರೈತ ಘಟಕದ ಗೌರಾಧ್ಯಕ್ಷರಾದ ಸುರೇಂದ್ರ ಕೋರ್ಯ, ಪ್ರಧಾನ ಕಾರ್ಯದರ್ಶಿ ಶಿವಾನಂದ್ ಬಿಸಿ ರೋಡ್, ಕೋಶಾಧಿಕಾರಿ ಮನೋಜ್ ಪಡೀಲ್, ಸುಳ್ಯ ತಾಲೂಕು ಘಟಕದ ಉಪಾಧ್ಯಕ್ಷರಾದ ತೀರ್ಥರಾಮ ಉಳುವಾರು, ಮಾಧವ ಗೌಡ ಸುಳ್ಯಕೋಡಿ, ರೋಹನ್ ಫೀಟರ್ ಕಾರ್ಯದರ್ಶಿ ಚೆನ್ನಕೇಶವ, ಯುವ ನಾಯಕ ಮಂಜುನಾಥ ಮಡ್ತಿಲ ಹಾಗೂ ಗ್ರಾಮ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಸ್ವಾಗತಿಸಿ, ಸಭೆಯ ಕಾರ್ಯಸೂಚಿಗಳನ್ನು ಮಂಡಿಸಿ ಧನಾತ್ಮಕ ನಿರ್ಣಯಗಳು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಸುದರ್ಶನ್ ಕೊಯಿಂಗೋಡಿ ಸಭೆಯಲ್ಲಿ ವಿಷಯಗಳ ಧನಾತ್ಮಕ ನಿರ್ಣಯವನ್ನು ರೂಪಿಸಲು ಸಹಕರಿಸಿದವರಿಗೆ ಅಭಿನಂದಿಸಿದರು.
ಅತಿವೃಷ್ಟಿ ಪ್ರಕೃತಿ ವಿಕೋಪದಿಂದ ಹಾನಿಯಾದ ಸಂಪಾಜೆ ಕಲ್ಲುಗುಂಡಿ ಭಾಗದ ಸ್ಥಳ ಪರೀಶೀಲಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಸಂತ್ರಸ್ತರು ವ್ಯಕ್ತಪಡಿಸಿದ ಎಲ್ಲಾ ಕಳವಳಗಳನ್ನು ಗಮನಿಸಿ ಸಂತ್ರಸ್ತರಿಗೆ ಪರಿಹಾರ ಹಾಗೂ ಹಾನಿಯಾದ ಮೂಲಭೂತ ಸೌಕರ್ಯಗಳ ಪುನರ್ರಚನೆ ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸುವ ಸಂದರ್ಭದಲ್ಲಿ ಆ ಭಾಗದ ವಾಸಿಗಳಿಗೆ ತೊಂದರೆಯಾಗದಂತೆ ರಕ್ಷಣಾ ಸೌಲಭ್ಯಗಳ ತುರ್ತು ಕಾಮಗಾರಿ ನಡೆಸಲು ಸರಕಾರಕ್ಕೆ ವಿಸೃತ ಪತ್ರ ಬರೆದು ಕೂಡಲೇ ಪೂರ್ಣ ಪ್ರಮಾಣದ ಪರಿಹಾರ ಮಂಜೂರು ಮಾಡಲು ಜಿಲ್ಲಾಡಳಿತ ಹಾಗೂ ಸರಕಾರಗಳ ಗಮನ ಸೆಳೆಯುವ ಭರವಸೆಯನ್ನು ನೀಡಲಾಯಿತು. 

. 27 ರಂದು ಉತ್ತರ ಕೊಡಗಿನ ಚೆಂಬು ಗ್ರಾಮದ ಅಡಿಕೆ ಎಲೆಹಳದಿ ರೋಗಭಾಧಿತ ಸಂತ್ರಸ್ಥರ ಸ್ವಯಂ ಘೋಷಿತ ಅರ್ಜಿಗಳನ್ನು ಬಾಲೆಂಬಿಯಲ್ಲಿ ಸಂಗ್ರಹಿಸಲು ಶ್ರೀ ನಿವಾಸ ನಿಡಿಂಜಿ,ಹಾಗೂ ರಘುನಾಥ ಚೆಂಬು ಅವರೊಂದಿಗೆ ಚರ್ಚಿಸಿ ನಿಗದಿ ಪಡಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಲುಗುಂಡಿ ಗ್ರಾಮ ರೈತಸಂಘದ ಗೌರವಾಧ್ಯಕ್ಷರಾದ ಆನಂದ ಗೌಡ, ಅಧ್ಯಕ್ಷರಾದ ವಸಂತ ಹಾಗೂ ಇತರ ಪದಾಧಿಕಾರಿಗಳು ಈ ತಂಡಕ್ಕೆ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಸಂತ್ರಸ್ಥರ ಮನೆ ಮನೆಗಳಿಗೆ ಭೇಟಿ ಮಾಡಿಸಿ ಅವರಲ್ಲಿ ವಿಶ್ವಾಸ ತುಂಬಿದರು.