ಗಾಂಧಿನಗರ ಶಾಲಾ ಕ್ರೀಡಾಂಗಣದಲ್ಲಿರುವ ಅಪಾಯದ ವಿದ್ಯುತ್ ಲೈನ್ ತಂತಿಗಳು

0

 

ಮೆಸ್ಕಾಂನ ಸಹಾಯಕ ಅಭಿಯಂತಕರಿಗೆ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಮನವಿ

 

ಸುಳ್ಯದ ಗಾಂಧಿನಗರ ಶಾಲಾ ಆಟದ ಮೈದಾನದಲ್ಲಿ ವಿದ್ಯುತ್ ಲೈನ್ ನ ತಂತಿಗಳು ಕ್ರೀಡಾಂಗಣಕ್ಕೆ ತಾಗಿಕೊಂಡು ಇರುವುದರಿಂದ ಮೈದಾನದಲ್ಲಿ ಆಟ ಆಡುವ ಮಕ್ಕಳಿಗೆ ಅಪಾಯ ಎದುರಾಗುವ ಬಗ್ಗೆ ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಸುಳ್ಯದ ಮೆಸ್ಕಾಂನ ಸಹಾಯಕ ಅಭಿಯಾoತಕರಿಗೆ ಎತ್ತರದ ಕಂಬಗಳನ್ನು ಅಳವಡಿಸಿ ಸಂಭವನೀಯ ಅಪಾಯವನ್ನು ತಪ್ಪಿಸಲು ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿದ ಅವರು, ಈ ಬಗ್ಗೆ ಸ್ಥಳ ಪರಿಶೀಲಿಸಿ, ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.