ಬಾಲಕೃಷ್ಣ ಗೌಡ ಕಂಡೂರು ನಿಧನ

0

ಕಡಬ ತಾಲೂಕು ರೆಂಜಿಲಾಡಿ ಬಾಂತಾಜೆ (ಕಂಡೂರು)ದಿ.ಸಂಕಪ್ಪ ಗೌಡರ ಪುತ್ರ ಬಾಲಕೃಷ್ಣ ಗೌಡರು(48ವ) ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಆ.16 ರಂದು ನಿಧನರಾದರು.ಮೂಲತ: ಅವರು ಪಂಜದವರು.ಬೆಂಗಳೂರಿನಲ್ಲಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಅವರು ಸುಮಾರು 24 ವರುಷಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ.ಕಳೆದ ಫೆಬ್ರವರಿಯಲ್ಲಿ ಅವರಾಗಿಯೇ ಪಂಜಕ್ಕೆ ಬಂದಿದ್ದರು. ಆದರೆ ಪಂಜದ ಅವರ ಜಾಗ‌ ಮಾರಾಟವಾಗಿದ್ದ ವಿಚಾರ ತಿಳಿದು ರೆಂಜಲಾಡಿಯ ಅವರ ಮನೆಗೆ ತೆರಳಿದ್ದರು.ಈ ವೇಳೆಯೇ ಅವರ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ.ಮೃತರು ತಾಯಿ ಶ್ರೀಮತಿ ಸೀತಮ್ಮ, ಸಹೋದರ ರೋಹಿತ್,ಸಹೋದರಿ ಶ್ರೀಮತಿ ಹರಿಣಾಕ್ಷಿ , ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.