ಸುಬ್ರಹ್ಮಣ್ಯ: ಕುಮಾರಧಾರ ಸ್ನಾನಘಟ್ಟದಲ್ಲಿ ನೀರಿಗಿಳಿದ ಯುವಕ ಕಾಣೆ, ಸಾವು ಶಂಕೆ

0

 

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದಲ್ಲಿ ನೀರಿಗಿಳಿದ ಯುವಕನೋರ್ವ ಕಾಣೆಯಾಗಿದ್ದು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

 

ಇಂದು ಮಧ್ಯಾಹ್ನ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಯುವಕ ಮೂಲತ ಮಂಡ್ಯದವರಾಗಿದ್ದು ಬೆಂಗಳೂರು ನಿವಾಸಿಯಾಗಿದ್ದು, 25 ವರ್ಷ ಪ್ರಾಯದ ಶಿವು ಎಂಬವರೆಂದು ತಿಳಿದುಬಂದಿದೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಜೀವರಕ್ಷಕ ಬೋಟಲ್ಲಿ ಹುಡುಕಾಟ ಆರಂಭಿಸಿದ್ದಾರೆ.