ಮಂಡ್ಯದಲ್ಲಿ ಗುರುದೇವ ಲಲಿತಕಲಾ ಅಕಾಡೆಮಿಯ ರಜತೋತ್ಸವ ಸಮಾರಂಭ

0

 

 

ರಾಷ್ಟ್ರೀಯ ನೃತ್ಯೋತ್ಸವವನ್ನು ಉದ್ಘಾಟಿಸಿದ ಡಾ. ನಿರ್ಮಲಾನಂದನಾಥ ಶ್ರೀ

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಸೇರಿದಂತೆ ಗಣ್ಯರಿಗೆ ಗುರುದೇವ ಪ್ರಶಸ್ತಿ ಪ್ರದಾನ

ಗುರುದೇವ ಲಲಿತಕಲಾ ಅಕಾಡೆಮಿಯ ರಜತೋತ್ಸವವ ಸಮಾರಂಭದ ಅಂಗವಾಗಿ ರಾಷ್ಟ್ರೀಯ ನೃತ್ಯೋತ್ಸವ ಸ್ಪರ್ಧೆ, ಗಣ್ಯರಿಗೆ ಸನ್ಮಾನ ಸಮಾರಂಭವು ಮಂಡ್ಯದ ಪಿ.ಇ.ಎಸ್. ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆ.19ರಂದು ಜರುಗಿತು.


ಮೂಲತಃ ಕನಕಮಜಲಿನವಾಗಿರುವ ರಾಧಾಕೃಷ್ಣ ಮೂರ್ಜೆ ಹಾಗೂ ಡಾ. ಚೇತನ ರಾಧಾಕೃಷ್ಣ ಮೂರ್ಜೆ ಅವರ ಗುರುದೇವ ಲಲಿತಕಲಾ ಅಕಾಡೆಮಿಗೆ ರಜತವರ್ಷದ ಹಿನ್ನೆಲೆಯಲ್ಲಿ ರಜತೋತ್ಸವ ಸಮಾರಂಭವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ದೀಪಬೆಳಗಿಸಿ, ಉದ್ಘಾಟಿಸಿ, ಶುಭನುಡಿಗಳನ್ನಿತ್ತರು.


ಗುರುದೇವೋತ್ಸವ – 2022 ಎನ್ನುವ ಶೀರ್ಷಿಕೆಯಡಿಯಲ್ಲಿ ಆರಂಭಗೊಂಡಿರುವ ರಾಷ್ಟ್ರೀಯ ನೃತ್ಯೋತ್ಸವ ಮತ್ತು ಸ್ಪರ್ಧಾ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಸ್ವಾಮೀಜಿಯವರು ಉದ್ಘಾಟಿಸಿದರು.
ಗುರುದೇವೋತ್ಸವ -2022 ರಾಷ್ಟ್ರೀಯ ನೃತ್ಯೋತ್ಸವ ಸ್ಪರ್ಧೆಯಲ್ಲಿ ರಾಷ್ಟ್ರದ ಹಲವು ನೃತ್ಯ ಪಟುಗಳು ಭಾಗವಹಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದಲೂ ಹಲವು ಮಂದಿ ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕಲಾಪೋಷಕ ಡಾ. ಬಿ.ಎಸ್. ಕಕ್ಕಿಲಾಯ, ಸಾಹಿತಿ ಎಸ್. ಶ್ರೀನಿವಾಸ ಶೆಟ್ಟಿ ಅವರುಗಳಿಗೆ ಗುರುದೇವ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕಿ ಡಾ. ಚೇತನ ರಾಧಾಕೃಷ್ಣ ಮೂರ್ಜೆ, ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ. ರಾಧಾಕೃಷ್ಣ ಮೂರ್ಜೆ ಉಪಸ್ಥಿತರಿದ್ದರು.