ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿಗೆ ಸ್ವಾಗತ : ನಾಳೆ ಪೆರಾಜೆಯಲ್ಲಿ ಸಮಾಲೋಚನಾ ಸಭೆ

0

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಅಮರ ಸುಳ್ಯ ಹೋರಾಟದ ರೂವಾರಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಆ.29 ರಂದು ಬೆಳಿಗ್ಗೆ ಸಂಪಾಜೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೆರಾಜೆಯಲ್ಲಿ ಪ್ರತಿಮೆಯನ್ನು ಸ್ವಾಗತಿಸುವ ಬಗ್ಗೆ ಚರ್ಚಿಸಲು ನಾಳೆ ಆ.23 ರಂದು ಮಂಗಳವಾರ ಪೂರ್ವಾಹ್ನ 11 ಗಂಟೆಗೆ ಪೆರಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಊರವರ ಸಭೆಯನ್ನು ಕರೆಯಲಾಗಿದೆ . ದೇಶಾಭಿಮಾನಿಗಳಾದ ಗ್ರಾಮಸ್ಥರು ಸಭೆಗೆ ಬಂದು ವಿಚಾರ ವಿನಿಮಯದಲ್ಲಿ ಭಾಗವಹಿಸಬೇಕೆಂದು ಪೆರಾಜೆ ಗ್ರಾಮ ಗೌಡ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.