ಬಿಜೆಪಿ ಮಂಡಲ ಸಮಿತಿಯಿಂದ ಹಿರಿಯ ನಾಗರಿಕರಿಗೆ ಸನ್ಮಾನ

0

 

 

ಸುಳ್ಯಮಂಡಲದ ಸುಳ್ಯ ನಗರ ಮಹಾಶಕ್ತಿ ಕೇಂದ್ರದಲ್ಲಿ , ಸಂಘಟನೆಯಲ್ಲಿ ಈ ಹಿಂದೆ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು ಇದೀಗ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯರಾದ ಶ್ರೀಮತಿ ಎಂಜಿ ಕಾವೇರಮ್ಮ, ಮಾಧವ ಗೌಡ ಕಲ್ಲುಗದ್ದೆ ಮತ್ತು ನಿತ್ಯಾನಂದ ಭಂಡಾರಿ ಇವರನ್ನು ಹಿರಿಯ ನಾಗರಿಕರ ದಿನವಾದ ಆ.21 ರಂದು ಗೌರವದಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಮಂಡಲ ಪ್ರಧಾನ ಕಾರ್ಯದರ್ಶಿ, ಸುಬೋಧ್ ಶೆಟ್ಟಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ, ಹಿರಿಯರ ಪ್ರಕೋಷ್ಠದ ಸಹಸಂಚಾಲಕರಾದ ಆನಂದರಾವ್ ಕಾಂತಮಂಗಲ, ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಮುಂತಾದವರು ಭಾಗವಹಿಸಿದ್ದರು.