ಬೆಳ್ಳಾರೆ ಜೂನಿಯರ್ ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ವರ್ಗಾವಣೆ

0
815

 

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾಲೇಜು ವಿಭಾಗದಲ್ಲಿರುವ ಎಲ್ಲಾ ಉಪನ್ಯಾಸಕರಿಗೆ ವರ್ಗಾವಣೆಯಾಗಿದ್ದು ಈಗ ಕಾಲೇಜಿನಲ್ಲಿ ಉಪನ್ಯಾಸಕರೇ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಪ್ರಭಾರ ಪ್ರಾಂಶುಪಾಲ ವಿಶ್ವನಾಥ ಗೌಡರವರಿಗೆ ಸುಳ್ಯ ಜೂನಿಯರ್ ಕಾಲೇಜಿಗೆ ವರ್ಗಾವಣೆಯಾಗಿದೆ. ಆದರೆ ಸ್ವಲ್ಪ ಸಮಯ ಬೆಳ್ಳಾರೆಯಲ್ಲೇ ಇರುವಂತೆ ಅವರನ್ನು ವಿನಂತಿಸಿಕೊಳ್ಳಲಾಗಿದೆ. ಆರು ಮಂದಿ ಉಪನ್ಯಾಸಕರಾದ ಹಸೀನಾ ಬಾನು ಸುಳ್ಯ ಜೂನಿಯರ್ ಕಾಲೇಜಿಗೆ, ಗೌತಮ್ ಕೆ .ಕಾಮತ್ ಕೊಂಬೆಟ್ಟು ಕಾಲೇಜಿಗೆ, ಸಬಿತ್ ಪಿ. ಸುಳ್ಯ ಗಾಂಧಿನಗರಕ್ಕೆ, ಸಂಧ್ಯಾ ಬಿ. ಕಾಣಿಯೂರು ಜೂನಿಯರ್ ಕಾಲೇಜಿಗೆ, ಕುಂದೂರ ನಾಯಕ್ ಚಾಮರಾಜನಗರಕ್ಕೆ, ಅನಿಲ್ ಜೆ. ಚಾಮರಾಜನಗರಕ್ಕೆ ವರ್ಗಾವಣೆಯಾಗಿದ್ದಾರೆ.
ಇವರಲ್ಲಿ ಪ್ರಭಾರ ಪ್ರಾಂಶುಪಾಲರನ್ನು ಹೊರತುಪಡಿಸಿ ಉಳಿದವರೆಲ್ಲರೂ ವರ್ಗಾವಣೆಗೊಂಡಲ್ಲಿಗೆ ಹೋಗಿದ್ದಾರೆ.
ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ೧೨೯ ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿಯಲ್ಲಿ ೧೨೯ ವಿದ್ಯಾರ್ಥಿಗಳಿದ್ದು, ಮೂವರು ಅತಿಥಿ ಶಿಕ್ಷಕಿರಿದ್ದಾರೆ. ಒಟ್ಟು ೪ ಮಂದಿ ಉಪನ್ಯಾಸಕರು ವರ್ಗಾವಣೆಗೊಂಡಿರುವ ೬ ಮಂದಿಯ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಪಾಠ ಪ್ರವಚನಕ್ಕೆ ಸಮಸ್ಯೆಯಾಗಿ ವಿದ್ಯಾರ್ಥಿಗಳು ಚಿಂತೆಗೊಳಗಾಗಿದ್ದಾರೆ.

LEAVE A REPLY

Please enter your comment!
Please enter your name here