ಚೆಂಬು : ಶ್ರೀ ಭಗವಾನ್ ಸಂಘದ ವತಿಯಿಂದ ಶ್ರಮದಾನ

0

ಕೊಡಗು ಸಂಪಾಜೆಯಲ್ಲಿ ಪ್ರವಾಹದಿಂದಾಗಿ ಮನೆ ಮುಳುಗಿ ಬದುಕು ಅತಂತ್ರವಾಗಿದ್ದ ವಿಶೇಷಚೇತನ ಬಾಲಾಚಾರಿ ಕುಟುಂಬ ಕಾಳಜಿಕೇಂದ್ರ ಮುಚ್ಚಿದಾಗ ಎಲ್ಲಿ ಹೋಗಲಾಗದೆ ದಿಕ್ಕೇ ತೋಚದಂತಾದ ಸಂದರ್ಭದಲ್ಲಿ ಅವರ ನೆರವಿಗೆ ನಿಂತ ಚೆಂಬು ಶ್ರೀ ಭಗವಾನ್ ಸಂಘ ಆ. ೨೦ ರಂದು ಶ್ರಮದಾನದ ಮೂಲಕ ಮನೆಯನ್ನು ವಾಸಯೋಗ್ಯವಾಗಿ ಪರಿವರ್ತಿಸುವ ಮೂಲಕ ಮಾನವೀಯತೆ ಮೆರೆದರು.

ಪ್ರವಾಹದಿಂದಾಗಿ ನೆರೆನೀರು ನಿಂತು ಸೆಗಣಿ ಸಾರಿಸಿದ ಮನೆಯೊಳಗೆ ಬತ್ತ, ಗೋದಿ, ಗಿಡಗಂಟಿಗಳು ಮೊಳಕೆಯೊಡೆದು ಅಸ್ತವ್ಯಸ್ತ ವಾದ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಮನೆಯೊಳಗೆ ನೆಲಕ್ಕೆ ಕಾಂಕ್ರೀಟ್ ಹಾಕಿ ನೆಲಸಾರಣೆ ಮಾಡಿ ಅಶಕ್ತ ಕುಟುಂಬ ವಾಸ ಮಾಡಲು ಪೂರಕ ವ್ಯವಸ್ಥೆ ಕಲ್ಪಿಸಿಕೊಟ್ಟರು. ಇದರೊಂದಿಗೆ ಸಂತ್ರಸ್ತರ ಬಾವಿ ಶುದ್ದಿಕರಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮನೆಯ ಆವರಣವನ್ನು ಶುಚಿಗೊಳಿಸಿ ವಾಸಯೋಗ್ಯವಾಗಿ ಮಾಡಿಕೊಟ್ಟರು.
ಕಾರ್ಯಾಚರಣೆಯು ಅನಂತ್ ಊರುಬೈಲು ,ಸಂಘದ ಅದ್ಯಕ್ಷ ಯತೀಶ್, ಕಾರ್ಯದರ್ಶಿ ಶರತ್ ಮತ್ತು ಸಂಯೋಜಕ ಶರತ್ ಕಾಸ್ಪಾಡಿರವರ ನಾಯಕತ್ವದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here