ಎನ್ನೆಂಸಿಯಲ್ಲಿ ಶ್ರೀಮತಿ ಜಾನಕಿ ವೆಂಕಟರಮಣ ಗೌಡರ 10ನೇ ಪುಣ್ಯಸ್ಮರಣೆ

0

ಶಿಕ್ಷಣ ಕ್ರಾಂತಿಯ ಹರಿಕಾರ, ಆಧುನಿಕ ಸುಳ್ಯದ ನಿರ್ಮಾತೃ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ನ ಸ್ಥಾಪಕಾಧ್ಯಕ್ಷರಾದ ಡಾ ಕುರುಂಜಿ ವೆಂಕಟರಮಣ ಗೌಡರ ಧರ್ಮಪತ್ನಿ ದಿ. ಜಾನಕಿ ವೆಂಕಟರಮಣ ಗೌಡರ 10ನೇ ಪುಣ್ಯತಿಥಿ ಕಾರ್ಯಕ್ರಮವು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದರು ದೀಪ ಬೆಳಗಿ ಪುಷ್ಪಾರ್ಚನೆ ಗೈದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಎಂ ಬಾಲಚಂದ್ರ ಗೌಡ, ಲಯನ್ ಎಂ ಬಿ ಸದಾಶಿವ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ, ಕಾಲೇಜಿನ ಕಛೇರಿ ಅಧೀಕ್ಷಕಿ ನಿವೇದಿತಾ ಎಂ, ಕಾಲೇಜಿನ ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.