ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ: ಗ್ರಂಥಪಾಲಕರ ದಿನಾಚರಣೆ

0

ಕೆ.ವಿ.ಜಿ.ದಂತ ಮಹಾವಿದ್ಯಾಲಯದಲ್ಲಿ ಆಗಸ್ಟ್ ೧೬, ರಂದು ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಎಸ್.ಆರ್. ರಂಗನಾಥನ್‌ರವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹರಾಗಿದ್ದು, ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಗುತ್ತಿತು.
ಕೆ.ವಿ.ಜಿ.ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದಡಾ. ಮೋಕ್ಷಾ ನಾಯಕ್‌ಗ್ರಂಥಾಲಯದ ಮಹತ್ವ ಮತ್ತು ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸದುಪಯೋಗ ಮಾಡಬೇಕೆಂದುಕರೆ ನೀಡಿದರು. ಮುಖ್ಯ ಅತಿಥಿಗಳಾದ ಕೆ.ವಿ.ಜಿ.ತಾಂತ್ರಿಕಮಹಾವಿದ್ಯಾಲಯದ ಮುಖ್ಯಗ್ರಂಥಪಾಲಕರಾದ ಶ್ರೀಯುತ. ಸೀತಾರಾಮ ಪಿ.ಬಿ.ರವರುಡಾ. ಎಸ್. ಆರ್.ರಂಗನಾಥನ್‌ರವರು ಬೆಳೆದು ಬಂದದಾರಿ ಮತ್ತುಅವರ ಸಾಧನೆಗಳಾದ,೧೯೬೬ರಕರ್ನಾಟಕ ಪಬ್ಲಿಕ್ ಲೈಬ್ರೆರಿಆಕ್ಟ್, ಗ್ರಂಥಾಲಯಗಳ ಅಭ್ಯುದಯಕ್ಕೆ ಪಂಚ ಸೂತ್ರವನ್ನು ಮತ್ತು ಪುಸ್ತಕಗಳ ವರ್ಗೀಕರಣಕ್ಕೆ ಸುಲಭವಿಧಾನಗಳನ್ನು ಅಳವಡಿಸಲು ಮುಖ್ಯ ಪಾತ್ರವಹಿಸಿದರು ಎಂದು ವಿವರಿಸಿದರು.
ಕೆ.ವಿ.ಜಿದಂತ ಮಹಾವಿದ್ಯಾಲಯದಗ್ರಂಥಾಲಯ ಸಮಿತಿ ಸಂಚಾಲಕರಾದಡಾ. ಶರತ್‌ಕುಮಾರ್ ಶೆಟ್ಟಿ,ವಕ್ರದಂತ ವಿಭಾಗ ಮುಖ್ಯಸ್ಥರು,ಗ್ರಂಥಪಾಲಕರ ದಿನಾಚರಣೆಯ ಶುಭಾಶಯಗಳು ತಿಳಿಸಿದರು. ಹಾಗೂ ಗ್ರಂಥಾಲಯ ಸಮಿತಿಯ ಸದಸ್ಯರಾದಡಾ. ಎಲ್. ಕೃಷ್ಣಪ್ರಸಾದ್‌ರವರು ದಂತ ಸಂರಕ್ಷಣೆ ವಿಭಾಗ ಮುಖ್ಯಸ್ಥರು ಇ-ಲೈಬ್ರೆರಿಗಳ ಬಳಕೆಯ ಬಗ್ಗೆ ಪ್ರೇರೇಪಿಸಿದರು.
ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತಉತ್ತಮಗ್ರಂಥಾಲಯ ಬಳಕೆ ಮಾಡುವ ವಿದ್ಯಾರ್ಥಿಗಗನ್‌ ಗೋಪಾಲ್‌ಜಿ. ಇವರಿಗೆ ಸ್ಮರಣೀಕೆ ನೀಡಿ ಗೌರವಿಸಿದರು.
ಕೆ.ವಿ.ಜಿ.ದಂತ ಮಹಾವಿದ್ಯಾಲಯದಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಆಡಳಿತಾಧಿಕಾರಿ, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು. ಅನನ್ಯ ಪ್ರಾರ್ಥಿಸಿದರು, ಮುಖ್ಯ ಗ್ರಂಥಪಾಲಕಿ ಶ್ರೀಮತಿ ಪೂರ್ಣಿಮ ಸ್ವಾಗತಿಸಿದರು. ವಿದ್ಯಾರ್ಥಿ ಕು.ಅನಘ ವಂದಿಸಿದರು ಮತ್ತು ಸಹಾಯಕಗ್ರಂಥಪಾಲಕ, ಚೇತನ್ ಅಮೆಮನೆ ಕಾರ್ಯಕ್ರಮ ನಿರೂಪಿಸಿದರು.