ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್. ವತಿಯಿಂದ  ಆರೋಗ್ಯ ಮಾಹಿತಿ ಕಾರ್ಯಕ್ರಮ

0

 

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್., ಯೂತ್ ರೆಡ್ ಕ್ರಾಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು, ದ.ಕ. ಸುಳ್ಯ ಐ.ಇ.ಸಿ. ವಿಭಾಗದ ವತಿಯಿಂದ ಗಾಂಧೀನಗರದ ಜನತಾ ಕಾಲೋನಿಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಮಿಳಾ, ಬಿ.ಹೆಚ್.ಇ.ಒ. ಸುಳ್ಯ ಇವರು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು ಇವರು ಮಾತನಾಡಿ ದೂಮಪಾನ ಹಾಗೂ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಈ ಅಭ್ಯಾಸ ಇರುವವರು ಹೆಚ್ಚಾಗಿ ಶ್ವಾಸಕೋಶದ ಸಮಸ್ಯೆ ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗೆ ಬೇಗನೆ ಗುರಿಯಾಗಿ ಬಿಡುತ್ತಾರೆ. ಆದ್ದರಿಂದ ಈ ದುಷ್ಚಟಗಳಿಂದ ದೂರವಿರಬೇಕು ಎಂದರು. ಇದೇ ಸಂದರ್ಭದಲ್ಲಿ ಅವರು ಡೆಂಗ್ಯೂ ಜ್ವರ ಹರಡುವಿಕೆ, ಲಕ್ಷಣಗಳು ಮತ್ತು ನಿಯಂತ್ರಣದ ಬಗ್ಗೆ ಅರಿವು ಮೂಡಿಸಿದರು. ಈ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಕನಕಾಂಗಿ ಪಿ.ಹೆಚ್.ಸಿ.ಒ., ಸುಳ್ಯ, ಕಾವ್ಯಾ ಬಿ.ಎಂ. ಸಿ.ಹೆಚ್.ಒ., ಸುಳ್ಯ, ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕಾಧಿಕಾರಿ ಡಾ. ಪ್ರಜ್ಞಾ ಎಂ.ಆರ್., ಸಹ ಘಟಕಾಧಿಕಾರಿ ಪ್ರೊ. ಸತ್ಯಜಿತ್ ಎಂ. ಮತ್ತು ಎನ್.ಎಸ್.ಎಸ್., ಯೂತ್ ರೆಡ್ ಕ್ರಾಸ್‌ನ ಸುಮಾರು ೫೦ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡಿದ್ದರು.