ಶ್ರೀಕೃಷ್ಣ ಪರಮಾತ್ಮನ ಜೀವನದ ಆದರ್ಶಗಳು ನಮಗೆಲ್ಲಾ ಪ್ರೇರಣೆ : ಡಾ. ರೇಣುಕಾಪ್ರಸಾದ್ ಕೆ.ವಿ.

0

 

ಶ್ರೀಕ್ರಷ್ಣ ಪರಮಾತ್ಮನ ಜೀವನದ ಆದರ್ಶಗಳು ನಮಗೆಲ್ಲಾ ಪ್ರೇರಣೆ. ಧರ್ಮರಕ್ಷಣೆಗಾಗಿ, ದುಷ್ಟರ ಶಿಕ್ಷೆಗಾಗಿ ಭಗವಾನ್ ಶ್ರೀ ಕೃಷ್ಣರುಅವತಾರ ಪುರುಷರಾಗಿನಮಗೆಲ್ಲಾ ಪ್ರೇರಣೆಯಾಗಿದ್ದಾರೆಎಂದುಅಕಾಡೆಮಿಆಫ್ ಲಿಬರಲ್‌ಎಜ್ಯುಕೇಶನ್  ಇದರ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಒಕ್ಕಲಿಗರ ಸಂಘದಉಪಾಧ್ಯಕ್ಷರಾದಡಾ. ರೇಣುಕಾ ಪ್ರಸಾದ್ ಕೆ.ವಿ ಯವರು ಹೇಳಿದರು.ಅವರು ದಿನಾಂಕ ೨೧ ರಂದು ಬೂಡು ಭಗವತಿ ಯುವ ಸೇವಾ ಸಂಘದ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು.
ಮಹಾಭಾರತದಂತಹ ಪುರಾಣವನ್ನು ಗಮನಿಸಿದಾಗ ಧರ್ಮದರೀತಿಯಲ್ಲಿ ನಡೆದ ಪಾಂಡವರು ಐವರಾದರು ಅವರ ರಕ್ಷಣೆಯ ಹೊಣೆ ಹೊತ್ತವನು ಶ್ರೀಕೃಷ್ಣ ಪರಮಾತ್ಮ, ಕೌರವರೂ ಬಹು ಸಂಖ್ಯಾತರಾದರೂ ಅನ್ಯಾಯದ ಮೂಲಕ ಗೆಲುವು ಸಾಧಿಸಲು ಶ್ರೀಕೃಷ್ಣ ಪರಮಾತ್ಮ ಅವಕಾಶ ಕೊಡಲಿಲ್ಲ. ಭಗವದ್ಗೀತೆಯ ಮೂಲಕ ಹಿಂದುಗಳಿಗೆ ಧರ್ಮವನ್ನು ಭೋದಿಸಿರುವ ಇದು ನಮ್ಮಧರ್ಮಗ್ರಂಥವಾಗಿಅದನ್ನುಅನುಸರಿಸುತ್ತಿದ್ದೇವೆಎಂದುಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದರು.
ಈ ಸಂಧರ್ಭದಲ್ಲಿ ಶ್ರೀ ಭಗವತಿಯುವ ಸೇವಾ ಸಂಘದ ವತಿಯಿಂದರಾಜ್ಯಒಕ್ಕಲಿಗರ ಸಂಘದಉಫಾಧ್ಯಕ್ಷರಾಗಿಆಯ್ಕೆಯಾದಡಾ. ರೇಣುಕಾ ಪ್ರಸಾದ್ ಕೆ.ವಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಸಮಾರಂಭದಅಧ್ಯಕ್ಷತೆಯನ್ನು   ಬೂಡು ರಾಧಕೃಷ್ಣರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯದ ಉಪವೃತ್ತ ನಿರೀಕ್ಷಕರಾದ  ದಿಲೀಪ್‌ ಜಿ.ಆರ್,   ಸುಧಾಕರ ಕುರುಂಜಿಭಾಗ್,   ಸದಾಶಿವ ಕೆ, ಶೀಮತಿ ಇಂದಿರಾ ರಾಜಶೇಖರ್,  ಆನಂದಗೌಡಖಂಡಿಗ,   ಅರವಿಂದ ಪೂಜಾರಿ, ಕು. ಕವಿತಾ ಬೂಡು,   ಮಧುಸೂದನ್ ಬೂಡು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here