ಸುಳ್ಯದಲ್ಲಿ ಅಮೃತ ಸಾಹಿತ್ಯೋತ್ಸವ – ಕಿರಣ ಗೌರವ ಸನ್ಮಾನ ಕಾರ್ಯಕ್ರಮ

0

 

 

 

 

ಜಲಶ್ರೀ ಪ್ರತಿಷ್ಠಾನ ಕಡ್ಲಾರು, ಕಿರಣ ರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು, ಕಲಾಮಾಯೆ ಏನೆಕಲ್ ಇದರ ವತಿಯಿಂದ ನಡೆದ ಅಮೃತ ಸಾಹಿತ್ಯೋತ್ಸವ ಆಗಸ್ಟ್ ೨೧ ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು.

ಬಹುಭಾಷಾ ಕವಿಗೋಷ್ಠಿ, ಕಥಾಗೋಷ್ಠಿ, ಅರೆಬಾಸೆ ಪದ್ಯಗಳ ಬುತ್ತಿ ಗಮ್ಮತ್ ಪುಸ್ತಕ ಬಿಡುಗಡೆ, ಕಿರಣ ಗೌರವ ಸನ್ಮಾನ, ಲೋಗೋ ಬಿಡುಗಡೆ, ದೇಶಭಕ್ತಿಗೀತೆಯ ಪೋಸ್ಟರ್ ಬಿಡುಗಡೆ ಹೀಗೆ ವಿವಿಧ ರೀತಿಯ ಸಾಹಿತ್ಯ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಹಳೆಬೇರು ಹೊಸಚಿಗುರು ಎಂಬಂತೆ ಹಿರಿಯ ಸಾಹಿತಿಗಳಿಗೆ ಗುರುಸ್ಥಾನ, ಹೊಸಮುಖಗಳಿಗೆ ಅವಕಾಶ ಕೊಟ್ಟು ಅವರನ್ನು ಬೆಳೆಸುವ ಉದ್ದೇಶದಿಂದ ಸಂಘಟಿಸಿದ ಅಮೃತ ಸಾಹಿತ್ಯೋತ್ಸವ ಯಶಸ್ವಿಯಾಗಿ ಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿದೆ.
ಹಿರಿಯ ಸಾಹಿತಿ, ನಿವೃತ್ತ ಸಿಡಿಪಿಒ ನೀರಬಿದಿರೆ ನಾರಾಯಣರವರು ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪ್ರಾಂಶುಪಾಲ ಬಾಬು ಗೌಡ ಅಚ್ರಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕೊರೋನಾ ಸಮಯದಲ್ಲಿ ಆಯೋಜಿಸಿದ ಆನ್ಲೈನ್ ಅರೆಬಾಸೆ ಪದ್ಯ ಕವನಗಳ ಗಮ್ಮತ್ ಕಾರ್ಯಕ್ರಮದ ಸಂಪಾದಿತ ಕೃತಿ ‘ಗಮ್ಮತ್’ ಪುಸ್ತಕವನ್ನು ಯೋಗೀಶ್ ಹೊಸೊಳಿಕೆ ಸಂಪಾದಿಸಿದ್ದಾರೆ. ಕೃತಿಯನ್ನು ನಿವೃತ್ತ ಉಪನ್ಯಾಸಕಿ ಲೀಲಾ ದಾಮೋದರರವರು ಬಿಡುಗಡೆಗೊಳಿಸಿದರು. ಹಿರಿಯ ಸಾಹಿತಿ ಎ.ಕೆ. ಹಿಮಕರ ಕೃತಿ ಪರಿಚಯಿಸಿದರು. ಜಲಶ್ರೀ ಪ್ರತಿಷ್ಠಾನದ ಲೋಗೊವನ್ನು ಈ ಸಮಯದಲ್ಲಿ ಬಿಡುಗಡೆಗೊಳಿಸಲಾಯಿತು.
ವಳಲಂಬೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪೂರ್ಲುಮಕ್ಕಿ, ಮಾಜಿ ಸೈನಿಕ ದುಗ್ಗಪ್ಪ ಗೌಡ ಕೊರತ್ತೋಡಿ, ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷ ಜಯಪ್ರಕಾಶ್ ಮೋಂಟಡ್ಕ, ಬೊಳುಬೈಲು ನವಚೇತನ ಯುವಕ ಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು, ಜಲಶ್ರೀ ಪ್ರತಿಷ್ಠಾನದ ಅಧ್ಯಕ್ಷ ನಿರಂಜನ ಕಡ್ಲಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಪಘಾತದಲ್ಲಿ ಅಗಲಿದ ಯುವ ಗಾಯಕ ವಿಶ್ವದೀಪ್ ಕುಂದಲ್ಪಾಡಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

 

ಬಹುಭಾಷಾ ಕವಿಗೋಷ್ಠಿ
ಸುಳ್ಯ ತಾಲ್ಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷ ಜನಾರ್ಧನ ಕಣಕ್ಕೂರು ರವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಪಲ್ಲವಿ ಕಂದ್ರಪ್ಪಾಡಿ, ಪೆರುಮಾಳ್ ಲಕ್ಷ್ಮಣ ಐವರ್ನಾಡು, ಜಸ್ಮಿತ ಕಂದ್ರಪ್ಪಾಡಿ, ಅಂಕಿತಾ ಕಡ್ಲಾರು, ಅನುರಾಧಾ ಶಿವಪ್ರಕಾಶ್ ಉಬರಡ್ಕ, ತೇಜಸ್ವಿನಿ ನೇರ್ಪು, ಉದಯಭಾಸ್ಕರ್ ಸುಳ್ಯ, ಪೂರ್ಣಿಮಾ ಟಿ. ಪೆರ್ಲಂಪಾಡಿ, ಇಂಚರ ಎಸ್.ಕೆ. ಪಡ್ರೆ, ಉಲ್ಲಾಸ್ ಕಜ್ಜೋಡಿ, ಚುಂಚನ ಪಿ. ಗೌಡ ಕಡೀರರವರು ಕವನಗಳನ್ನು ವಾಚಿಸಿದರು. ಸೌಮ್ಯಾ ಸಿ.ಡಿ. ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.

ಬಹುಭಾಷಾ ಕಥಾಗೋಷ್ಠಿ

ಹಿರಿಯ ಸಾಹಿತಿಗಳಾದ ಕೆ. ಆರ್. ತೇಜಕುಮಾರ್ ರವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕಥಾಗೋಷ್ಠಿ ವಿಶಿಷ್ಟ ರೀತಿಯಲ್ಲಿ ನಡೆಯಿತು. ಕಥೆಗಾರರಾಗಿ ಭೀಮರಾವ್ ವಾಸ್ಟರ್ ಸುಳ್ಯ, ಸಾನು ಉಬರಡ್ಕ, ಚಂದ್ರಾವತಿ ಬಡ್ಡಡ್ಕ, ಚಿದಾನಂದ ಪರಪ್ಪ, ಆದ್ಯಂತ್ ಅಡೂರು, ಪ್ರವೀಣ್ ಆಚಾರ್ಯ ಪೇರಳಕಟ್ಟೆ, ಮಹೇಶ್ ಕೊಯಿಂಗಾಜೆ ಭಾಗವಹಿಸಿದ್ದರು. ಪದ್ಮನಾಭ ಸೇವಾಜೆ ಕಾರ್ಯಕ್ರಮ ನಿರೂಪಿಸಿದರು.

 

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಹೆಚ್ಚು ಜನಪ್ರಿಯಗಳಿಸಿದ ರಮ್ಯಾ ಅಡ್ಕಾರು ಮತ್ತು ಪ್ರಾಪ್ರಿ ಗೌಡ ಅರಂತೋಡುರವರಿಗೆ ಕಿರಣ ಗೌರ ಸನ್ಮಾನ ಮಾಡಿ ಗೌರವಿಸಲಾಯಿತು. ಹಿರಿಯ ಸಾಹಿತಿ ಕೆ.ಆರ್. ವಿದ್ಯಾಧರ ಬಡ್ಡಡ್ಕ ಸನ್ಮಾನ ನೆರವೇರಿಸಿದರು. ಈ ಸಂದರ್ಭದಲ್ಲಿ ನಿರಂಜನ ಕಡ್ಲಾರು ರಚನೆಯ ಅಂಕಿತ ಕಡ್ಲಾರು ಹಾಡಿದ ದೇಶಭಕ್ತಿಗೀತೆಯ ಹಾಡಿನ ಪೋಸ್ಟರ್ ಬಿಡುಗಡೆಗೊಂಡಿತು.

ವೇದಿಕೆಯಲ್ಲಿ ಬಾಳಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ ಉಪಸ್ಥಿತರಿದ್ದು ಶುಭ ಹಾರೈಸಿದರು.
ಭಾಗವಹಿಸಿದ ಎಲ್ಲ ಕವಿಗಳಿಗೆ, ಕತೆಗಾರರಿಗೆ ಅಭಿನಂದನಾ ಪತ್ರ, ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಯೋಗೀಶ್ ಹೊಸೊಳಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಗ ಗುರು ಶರತ್ ಮರ್ಗಿಲಡ್ಕ ಸ್ವಾಗತಿಸಿ, ಕಲಾಮಾಯೆ ಅಧ್ಯಕ್ಷ ಸುಧೀರ್ ಏನೆಕಲ್ ವಂದಿಸಿದರು. ವಿನೋದ್ ಮೂಡಗದ್ದೆ, ಪ್ರವೀಣ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.