ಅರೆಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಗಾರಕ್ಕೆ ಸುಳ್ಯದ ಕಾನೂನು ಸ್ವಯಂ ಸೇವಕ ಸದಸ್ಯರು ಭಾಗಿ

0

 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು,ದ ಕ ಜಿಲ್ಲೆ ಹಾಗೂ ಮಂಗಳೂರು ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಅರೆಕಾಲಿಕ ಸ್ವಯಂ ಸೇವಕರಿಗೆ ಒಂದು ದಿನದ ತರಬೇತಿ ಕಾರ್ಯಗಾರ ಆ.  23 ರಂದು ಮಂಗಳೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

ತರಬೇತಿ ಕಾರ್ಯಗಾರದಲ್ಲಿ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನ ಅರೆಕಾಲಿಕ ಸ್ವಯಂ ಸೇವಕ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಸುಳ್ಯದ ಕಾನೂನು ಸ್ವಯಂಸೇವಕ ಸಮಿತಿಯ ಸದಸ್ಯರುಗಳಾದ ಹಿರಿಯ ವಕೀಲಗಳಾದ ಜಗದೀಶ್ ಹುದೇರಿ, ಪಿ ಭಾಸ್ಕರ್ ರಾವ್, ವಕೀಲೆ ರಕ್ಷಿತ ಪಿ, ಪತ್ರಿಕಾ ವರದಿಗಾರ ಹಸೈನಾರ್ ಜಯನಗರ, ಕಾನೂನು ವಿದ್ಯಾರ್ಥಿನಿ ಭವ್ಯ ಕೆ ಭಾಗವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ದ ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ರವೀಂದ್ರ ಎಂ ಜೋಶಿ ದೀಪ ಬೆಳಗಿಸಿ ಕಾರ್ಯಗಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ಕಾನೂನು ಮಾಹಿತಿಗಳನ್ನು ಮನೆ ಮನೆಗಳಿಗೆ ಮುಟ್ಟಿಸಲು ಮತ್ತು ಸಮಾಜದ ಅಭಿವೃದ್ಧಿಗೆ ಸಾರ್ವಜನಿಕರನ್ನು ಪ್ರೋತ್ಸಾಹಿಸಲು ಅರೆಕಾಲಿಕ ಸ್ವಯಂ ಸೇವಕರ ಸಹಕಾರ ಬೇಕಾಗುತ್ತದೆ.ಆದ್ದರಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸುವವರು , ಅಂಗನವಾಡಿ ಶಿಕ್ಷಕರು, ವೈದ್ಯರು, ಇಂಜಿನಿಯರ್ ಗಳು, ವಿದ್ಯಾರ್ಥಿ ಗಳು, ಆಶಾಕಾರ್ಯಕರ್ತರು, ವಕೀಲರು ಇವರನೆಲ್ಲಾ ಒಳಗೊಂಡ ಸದಸ್ಯರನ್ನು ಸೇರಿಸಿ ಕಾನೂನು ಹರಿವು ಮಾಹಿತಿಯನ್ನು ಸಮಾಜಕ್ಕೆ ತಲುಪಿಸಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಅವಕಾಶವನ್ನು ನೀಡಲಾಗಿದೆ.
ಆದರಿಂದ ಇಂದು ಇಲ್ಲಿ ನೀಡುವ ತರಬೇತಿಯ ಮಾಹಿತಿಯನ್ನು ಪಡೆದುಕ್ಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಬಾರಿಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಪೃಥ್ವಿರಾಜ್ ಕೆ ವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶೆ ಶೋಭ ಬಿ ಜೆ ಉಪಸ್ಥಿತರಿದ್ದರು.
ತರಬೇತಿ ಕಾರ್ಯಗಾರದಲ್ಲಿ ಮಂಗಳೂರು ವಕೀಲರ ಸಂಘದ ಸದಸ್ಯರುಗಳಾದ ಮಯೂರ ಕೀರ್ತಿ, ಪ್ರಶಾಂತ್, ಶ್ರೀಮತಿ ಗೌರಿ, ಶ್ರೀಮತಿ ಕವಿತಾ, ಜಿನೇಂದ್ರ ಕುಮಾರ್, ನಿಕೇಶ್ ಶೆಟ್ಟಿ ಕೆ ಅವರುಗಳು ವಿವಿಧ ಕಾನೂನು ಮಾಹಿತಿಗಳ ಕುರಿತು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಕಾನೂನು ಸ್ವಯಂಸೇವಕರು ಭಾಗವಹಿಸಿದ್ದರು.

ಡಿಎಲ್‌ಎಸ್‌ಎ ಪ್ಯಾನಲ್ ಅಡ್ವೋಕೇಟ್ ಶುಕರಾಜ್ ಎಸ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿ ಸಿಬ್ಬಂದಿಗಳಾದ ಸೈಯದ್ ರಫೀಕ್, ರೂಪೇಶ, ಶ್ರೀಮತಿ ಶಾಂತ, ಜಗದೀಶ್ ಪವಿತ್ರ ಸಹಕರಿಸಿದರು.