ಪಂಜದಲ್ಲಿ ಸಂಭ್ರಮದ ಕೆಸರ್ ದ ಪರ್ಬ

0

 

. ಪಂಜದ ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಅಳ್ಪೆ-ಚಿಂಗಾಣಿಗುಡ್ಡೆ ಇದರ ಜಂಟಿ ಆಶ್ರಯದಲ್ಲಿ ಜರುಗಿದ (ಕೆಸರ್ ದ ಪರ್ಬ )ಕೆಸರು ಗದ್ದೆ ಸ್ಪರ್ಧಾ ಕ್ರೀಡಾಕೂಟ ಅತ್ಯಂತ ಸಂಭ್ರಮದಿಂದ ನಡೆಯಿತು.


ಕೆಸರುಗದ್ದೆಯಲ್ಲಿ ನಿಧಿ ಹುಡುಕುವುದು, ವಾಲಿಬಾಲ್, ತ್ರೋಬಾಲ್, ಫುಟ್ ಬಾಲ್, ಮಡಿಕೆ ಒಡೆಯುವುದು, ಪಿರಮಿಡ್,ಉಪ್ಪು ಮುಡಿ ಮೊದಲಾದ ಕೆಸರುಗದ್ದೆ ಕ್ರೀಡಾ ಕೂಟಗಳು ವಿವಿಧ ವಿಭಾಗಗಳಲ್ಲಿ ನಡೆಯಿತು. ಅಪರೂಪದ ಕೆಸರುಗದ್ದೆಯ ಕ್ರೀಡಾಕೂಟದಲ್ಲಿ ವಯಸ್ಸಿನ ಮಿತಿ ಇಲ್ಲದೆ ಜನರು ಬೆರೆತು ಸಂತೋಷದಿಂದ
ಸಂಭ್ರಮಿಸಿದರು. ಜೊತೆಗೆ ಜಾನಪದ ಹಾಡು,ಪಾರ್ದನ,ಒಬೇಲೆ ಹಾಡುಗಳ ಸ್ಪರ್ಧೆ ನಡೆದಿತ್ತು.ಅನೇಕ ದಿನಗಳಿಂದ ಗದ್ದೆಯನ್ನು ಕ್ರೀಡಾಕೂಟಕ್ಕಾಗಿ ರಚನೆ ಗೊಳಿಸಿ ಅಳಿವಿನಂಚಿನಲ್ಲಿರುವ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸಿರುವ ಜೈ ಕರ್ನಾಟಕ ಯುವಕ ಮಂಡಲ
ಮತ್ತು ಕೃಪಾ ಯುವತಿ ಮಂಡಲ ಮಾದರಿ ಸಂಘಟನೆಯಾಗಿದೆ.