ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್   ಸಮಿತಿಯ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

0

 

ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ (ರಿ) ಸಿ ಎಫ್ ಸಿ ಇದರ ವಾರ್ಷಿಕ ಮಹಾಸಭೆಯು ಜಲೀಲ್ ಭಾರತ್ ರವರ ಅಧ್ಯಕ್ಷತೆಯಲ್ಲಿ ಆಗಸ್ಟ್ 21ರಂದು ನಡೆಯಿತು.

ಕಳೆದ ಸಾಲಿನ ವಾರ್ಷಿಕ ವರದಿಯನ್ನು ಸಮಿತಿ ಪದಾಧಿಕಾರಿ ಹಾಶಿಮ್ ಕೆ ಎಚ್ ಮಂಡಿಸಿದರು.ರಾಶಿದ್ ಎಂ ಎ ರವರು ಲೆಕ್ಕ ಪತ್ರ ಮಂಡಿಸಿದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆಗಳು ನಡೆದವು.
ನಂತರ ಮುಂದಿನ ಸಾಲಿನ ನೂತನ ಸಮಿತಿ ರಚಿಸಲಾಯಿತು. ಗೌರವದ್ಯಕ್ಷರಾಗಿ ಹಸನ್ ಪ್ರಗತಿ, ಅಧ್ಯಕ್ಷರಾಗಿ ಯಾಸಿರ್ ಬಿ ಕೆ, ಉಪಾಧ್ಯಕ್ಷರಾಗಿ ಫಾರೂಕ್ ಕಾನಕ್ಕೋಡ್, ಕಾರ್ಯದರ್ಶಿಯಾಗಿ ಸಾಬಿತ್ ಕಲ್ಲುಗುಂಡಿ, ಜೊತೆ ಕಾರ್ಯದರ್ಶಿಯಾಗಿ ರುಶೈದ್ ಕಡೆಪಾಲ, ಕೋಶಾಧಿಕಾರಿಯಾಗಿ ಅಮೀರ್ ಕಲ್ಲುಗುಂಡಿ, ಸಂಘಟನ ಕಾರ್ಯದರ್ಶಿಯಾಗಿ ಹಾಶಿಮ್ ಎಸ್ ಎಚ್ ಹಾಗೂ ಸಮಿತಿ ಸದಸ್ಯರುಗಳಾಗಿ ಜಲೀಲ್ ಭಾರತ್, ಸಲೀಕ್ ಎಸ್ ಎ, ರಾಝೀಕ್ ಇವರನ್ನು ಆಯ್ಕೆ ಮಾಡಲಾಯಿತು.
ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಲಿರುವ ಸಿ ಎಫ್ ಸಿ ಇದರ ಸಕ್ರಿಯ ಸದಸ್ಯರಾದ ಉಬೈದ್ ರವರಿಗೆ ಸಿ ಎಫ್ ಸಿ ವತಿಯಿಂದ ಬಿಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು.