ಹಾಲೆಮಜಲು : ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ

0

ದೇವಚಳ್ಳ (ಗುತ್ತಿಗಾರು) ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಬೂತ್ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳ ಸಭೆ ಹಾಲೆಮಜಲಿನ ವೆಂಕಟೇಶ್ವರ ಸಭಾ ಭವನದಲ್ಲಿ ನಿನ್ನೆ ನಡೆಯಿತು. ಸಭೆಯಲ್ಲಿ ಮಂಗಳವಾರ ಸುಳ್ಯದಲ್ಲಿ ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪಿ.ಸಿ ಜಯರಾಮ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರವರು ಕಾರ್ಯಕರ್ತರಿಗೆ ಕಾಂಗ್ರೆಸ್ ನ ವಿಚಾರಧಾರೆಗಳನ್ನು ತಿಳಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ ಹಾಗು ಸುಳ್ಯ ವಿಧಾನಸಭಾ ಉಸ್ತುವಾರಿ ಕೃಷ್ಣಪ್ಪ ಮಾತನಾಡಿ ಸುಳ್ಯದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಕರೆಕೊಟ್ಟರು. ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ದಿನೇಶ್ ಅಂಬೆಕಲ್ಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಹಿರಿಯರಾದ ರಾಜಾರಾಂ ಭಟ್, ಪರಮೇಶ್ವರ ಕೆಂಬಾರೆ, ಪರಶುರಾಮ ಚಿಲ್ತಡ್ಕ, ಸನತ್ ಮುಳುಗಾಡು, ವಿಜೇಶ್ ಹಿರಿಯಡ್ಕ, ವಿನುಪ್ ಮಲ್ಲಾರ, ಮಣಿಕಂಠ ಕೊಳಗೆ, ದಿನೇಶ್ ಮಡ್ತಿಲ, ಆನಂದ ಬೆದ್ರಪಣೆ, ರವಿಕುಮಾರ್ ಕಿರಿಭಾಗ, ಮೋಹಿತ್ ಹರ್ಲಡ್ಕ, ಕೀರ್ತನ್ ಕೊಡಪಾಲ, ಚೇತನ್ ಕಜೆಗದ್ದೆ , ಶರತ್ ಕರಂಗಲ್ಲು ಹಾಗು ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು. ದಿನೇಶ್ ಹಾಲೆಮಜಲು ವಂದಿಸಿದರು.