ಉತ್ತಮ ಕೃಷಿಕ ಮತ್ತು ಹೈನುಗಾರಿಕೆ ಪ್ರಶಸ್ತಿ ಪಡೆದ ಸಿ.ಹೆಚ್. ಅಶ್ರಫ್‌ರವರಿಗೆ ಸನ್ಮಾನ

0

ಇತ್ತೀಚೆಗೆ ಕಾಸರಗೋಡು ಜಿ.ಪಂ. ವ್ಯಾಪ್ತಿಯ ದೇಲಂಪಾಡಿ ಪಂಚಾಯತ್ ವತಿಯಿಂದ ನೀಡಲಾದ ಉತ್ತಮ ಕೃಷಿಕ ಹಾಗೂ ಹೈನುಗಾರಿಕೆ ಪ್ರಶಸ್ತಿ ಪಡೆದ ಇಂಡಿಯನ್ ಗ್ರೂಪ್ಸ್ ಮಾಲಕರಾದ ಸಿ.ಹೆಚ್. ಅಶ್ರಫ್‌ರವರಿಗೆ ಇಂಡಿಯನ್ ಸಮೂಹ ಸಂಸ್ಥೆಗಳ ಉದ್ಯೊಗಿಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಮತ್ತು ನೋಟರಿ ಅಬೂಬಕ್ಕರ್ ಎನ್.ಅಡ್ಕಾರ್ ಮತ್ತು ಇಂಜಿನಿಯರ್ ಅಬ್ದುಲ್ ನಾಸಿರ್ ಎನ್.ಎ.ರವರು ಅಶ್ರಫ್‌ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಕೇಕ್ ಕಟ್ ಮಾಡುವುದರ ಮೂಲಕ ಅಶ್ರಫ್‌ರವರಿಗೆ ಸಿಹಿಯನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ಕೆ.ಬಿ.ಇಬ್ರಾಹಿಂ, ಮಹಮ್ಮದ್ ಅಶ್ಫಾಝ್, ಅಬೂಬಕ್ಕರ್ ಐವರ್ನಾಡು, ಅಶ್ರಫ್ ಮರಕ್ಕಡ, ಚಂದ್ರಶೇಖರ, ಇಸ್ಮಾಯಿಲ್, ಭೀಮಣ್ಣ ಮತ್ತು ಸಹೊದ್ಯೂಗಿಗಳು ಉಪಸ್ಥಿತರಿದ್ದರು.