ಬೆಳ್ಳಾರೆಯಲ್ಲಿ 24 ನೇ ವರ್ಷದ ಮೊಸರು ಕುಡಿಕೆ

0

ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ೨೪ ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮವು ಬೆಳ್ಳಾರೆ ಶಾಲಾ ಕ್ರೀಡಾಂಗಣದಲ್ಲಿ  ಆಗಸ್ಟ್೨೧  ೨ ನಡೆಯಿತು. ಬೆಳಿಗ್ಗೆ  ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ  ಉದಯಕುಮಾರ ಉಪಾದ್ಯಾಯ ಇವರು ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಬಳಿಕ ಮುದ್ದುಕೃಷ್ಣ ಸ್ಪರ್ದೆ, ವಿವಿದ ಕ್ರೀಢಾ ಸ್ಪರ್ದೆಗಳು ನಡೆದವು ಅಪರಾಹ್ನ ೨ ರಿಂದ ಸಭಾ ಮತ್ತು ಸನ್ಮಾನ ಕಾರ್ಯಕ್ರಮ ಸಂಘದ ಅದ್ಯಕ್ಷರಾದ ಸಂಜಯ್ ನೆಟ್ಟಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು ರೋಟರಿ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯೋಪಾದ್ಯಾಯ  ಅಚ್ಚುತ ಅಟ್ಲೂರು ಇವರಿಗೆ ಗುರುರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಯೋಧ ಕ್ಯಾಪ್ಟನ್ ಸುದಾನಂದ ಪೆರುವಾಜೆ, ನಿವೃತ್ತ ಬ್ಯಾಂಕ್ ಆಫ್ ಬರೋಡ ನೌಕರ ವಿಶ್ವನಾಥ ರೈ ತಡಗಜೆ ಇವರುಗಳನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ೨೦೨೨ರ ಸಾಧಕರಾದ ಸಾತ್ವಿಕ್ ಯಚ್ ಎಸ್ , ಚಂದನಲಕ್ಷ್ಮಿ ನೆಟ್ಟಾರು, ಕಾವ್ಯಶ್ರೀ ದೇವರಗುಂಡಿ ಇವರುಗಳ ಸಾಧನೆಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತು ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ರೊಟರಿ ಕ್ಲಬ್ ಬೆಳ್ಳಾರೆ ಟೌನ್ ಪೂರ್ವಾಧ್ಯಕ್ಷರಾದ ರೊ. ಪದ್ಮನಾಭ ಬೀಡು ನಿವೃತ್ತ ಕಸ್ಟಮ್ಸ್ ಅಧಿಕಾರಿ ರಾಮಕೃಷ್ಣ ಭಟ್ ಕುರುಂಬುಡೇಲು ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ,ಸ್ನೇಹಿತರ ಕಲಾ ಸಂಘದ ನಿಕಟಪೂರ್ವಾಧ್ಯಕ್ಷರಾದ ಕೊರಗಪ್ಪ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ನೇಹಿತರ ಕಲಾ ಸಂಘದ ಕಾರ್ಯದರ್ಶಿ ವಸಂತ ಉಲ್ಲಾಸ್ ಸ್ವಾಗತಿಸಿ ಜತೆ ಕಾರ್ಯದರ್ಶಿ ಆನಂದ ಮಣಿಯಾಣಿ ಉಮಿಕ್ಕಳ ವಂದಿಸಿದರು. ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.