ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಕ್ಯಾಂಪ್

0

 

 

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳಿನ ನಾಲ್ಕನೇ ಮಂಗಳವಾರವಾದ ಆ. 23ರ೦ದು ತಾಲ್ಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ನಡೆಯಿತು.

 

ಆರೋಗ್ಯ ಇಲಾಖೆ ಮತ್ತು ವಿಕಲಚೇತನರ ಇಲಾಖೆಯ ವತಿಯಿಂದ ನಡೆಯುವ ಈ ಕ್ಯಾಂಪ್ ನಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ತಾಲ್ಲೂಕು ಪಂಚಾಯತ್ ನ ವಿಕಲಚೇತನ ಇಲಾಖೆಯ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಪ್ರವೀಣ್ ನಾಯಕ್ , ಇತರ ಪಂಚಾಯತ್ ಗಳ ವಿ.ಆರ್.ಡಬ್ಲ್ಯೂ ಗಳಾದ ಪುಟ್ಟಣ್ಣ, ಕುಸುಮಾವತಿ, ಪುಷ್ಪಶ್ರೀ, ಷಣ್ಮುಖ,ಕೃಷ್ಣ ಪ್ರಸಾದ್, ದಿನೇಶ, ವೆಂಕಟ್ರಮಣ, ಉಮ್ಮರ್, ರೇಖಾ, ಸವಿತ,ಹರ್ಷಿತ್, ಆಶೀಸ್ , ಆರೋಗ್ಯ ಅಧಿಕಾರಿ ಬಸವರಾಜ್, ದಾದಿ ನಯನ ಮತ್ತು ಇನ್ನಿತರರು ಹಾಜರಿದ್ದರು.

ವೈದ್ಯಾಧಿಕಾರಿ ಡಾ. ಕರುಣಾಕರ್ ನೇತ್ರತ್ವದಲ್ಲಿ ಡಾ.ಪದ್ಮನಾಭ, ಡಾ. ಹಿಮಾಕರ್, ಡಾ.ಅರ್ಚನಾ ಮತ್ತು ಇತರ ತಜ್ಞ ವೈದ್ಯರು ಸಹ ಕಾರ ನೀಡಿದರು. ಸುಮಾರು ಎಂಡೋ ಸೇರಿದಂತೆ ರಿನೀವಲ್ ಸೇರಿದಂತೆ, ಸುಮಾರು 40 ಜನರು ಗುರುತಿನ ಚೀಟಿ ಪಡೆದರು.