ಸುಬ್ರಹ್ಮಣ್ಯ :ಕುಮಾರಧಾರ ಸ್ನಾನ ಘಟ್ಟದಲ್ಲಿ ಮುಳುಗಿದ ಮಂಡ್ಯದ ಯುವಕ

0

ಅಗ್ನಿಶಾಮಕ, ಈಜು ತಜ್ಞರ 4 ದಿನಗಳ ಹುಡುಕಾಟಕ್ಕೆ ಸಿಗಲಿಲ್ಲ ಫಲ

ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಆಲಿಸುತ್ತಿಲ್ಲ : ಪೋಷಕರ ಅಳಲು

ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದಲ್ಲಿ ಆ.21ರಂದು ನೀರಲ್ಲಿ ಮುಳುಗಿದ ಮಂಡ್ಯದ ಯುವಕ ಸ್ವಾಮಿ ಅವರು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಶಂಕೆಯಿದ್ದು, ಮೂರು ದಿನಗಳ ಕಾಲ ಹುಡುಕಾಟ ಮಾಡಲಾಗಿದೆ. ಇಂದಿಗೆ ನಾಲ್ಕನೇ ದಿನ. ಬಿದ್ದಲ್ಲಿಂದ 6 ಕಿ.ಮೀ ದೂರ ಹುಡುಕಲಾಗಿದೆಯಾದರೂ ಯಾವುದೇ ಫಲಿತಾಂಶ ದೊರಕಲಿಲ್ಲ. ಕಾಣೆಯಾದ ಯುವಕನ ಪೋಷಕರು, ಸಂಬಂಧಿಕರು ಸುಬ್ರಹ್ಮಣ್ಯದಲ್ಲೇ ಹತಾಶೆಯಿಂದ ಕಾಯುತ್ತಿದ್ದು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳದಿರುವ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.