ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ವತಿಯಿಂದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

0
198

ಸುಳ್ಯ ಎಸ್ ವೈ ಎಸ್ ಮತ್ತು ಎಸ್ ಎಸ್ ಎಫ್ ವತಿಯಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಗಸ್ಟ್ 24ರಂದು ಸುಮಾರು 75ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನು ಮೆರೆದರು. ಹಲಸು, ಮಾವು, ನೇರಳೆ,ಪೇರಳೆ ಮುಂತಾದ ಹಣ್ಣುಗಳ ಗಿಡಗಳನ್ನು ನೆಡಲಾಯಿತು.


ಸಂಘಟನೆಯ ಮುಖಂಡರುಗಳಾದ ಸಿದ್ದಿಕ್ ಗೂನಡ್ಕ, ಶರೀಫ್ ಜಯನಗರ,ಸಿದ್ದೀಕ್ ಬಿ ಎ ನಾವೂರು,ಹಸೈನಾರ್ ಗುತ್ತಿಗಾರು,ಅಬ್ದುಲ್ ಖಾದರ್ ಅಣಗೇರಿ,ಮಹಮ್ಮದ್ ನಾವೂರು,ಬಷೀರ್ ಕಲ್ಲುಮುಟ್ಲು, ಕಬೀರ್ ಗುರುಂಪು, ಇರ್ಫಾನ್ ಏಣಾವರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರವಿ ಆಲೆಟ್ಟಿ ಮೊದಲಾದವರು ಶ್ರಮಧಾನದಲ್ಲಿ ಭಾಗವಹಿಸಿದ್ದರು.


ಎಸ್ ವೈ ಎಸ್ ಮುಖಂಡ ಸಿದ್ದೀಕ್ ಕಟ್ಟೆಕಾರ್, ಹಾಗೂ ಹಾಬಿದ್ ಜಯನಗರ ಚಾ ತಿಂಡಿ ಊಟದ ವ್ಯವಸ್ಥೆಯನ್ನು ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here