ಅನಿಂದಿತ್ ಗೌಡ ಸಂಪಾದಿಸಿದ ‘ರಿ ಕಾಲಿಂಗ್ ಅಮರ ಸುಳ್ಯ’ ಪುಸ್ತಕ ಲೋಕಾರ್ಪಣೆ

0
132

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ  ಅನಿಂದಿತ್ ಗೌಡ ಸಂಪಾದಿಸಿದ  “ರಿಕಾಲಿಂಗ್ ಅಮರ ಸುಳ್ಯ” ಕೃತಿಯನ್ನು 24 ಆಗಸ್ಟ್ 2022 ರಂದು ಮಂಗಳೂರಿನ ತುಳು-ಭವನದ ಸಿರಿಚಾವಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.

ಪುಸ್ತಕ ಲೋಕಾರ್ಪಣೆಯ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತುಳುವ ಬೊಳ್ಳಿ ದಯಾನಂದ ಜಿ. ಕತ್ತಲ್ ಸಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿಗಳಾದ ಕಾರ್ಗಿಲ್ ಯುದ್ದದ ಸಮಯದಲ್ಲಿ ಸೇವೆ ಸಲ್ಲಿಸಿದ ಕರ್ನಲ್ ಶರತ್ ಭಂಡಾರಿ ನಿಟ್ಟೆಗುತ್ತು ಮತ್ತು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪಾಲ್ಗೊಂಡಿದ್ದರು. ಖ್ಯಾತ ವಾಗ್ಮಿಗಳಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಪುಸ್ತಕದ ಸಂಕ್ಷಿಪ್ತ ಪರಿಚಯವನ್ನು ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಯಕ್ಷರಂಗದ ಹಾಸ್ಯ ಕಲಾವಿದರು ಕಡಬ ದಿನೇಶ್ ರೈ ಮತ್ತು ಅಕಾಡೆಮಿಯ ಸದಸ್ಯ ನಾಗೇಶ್ ಕುಲಾಲ್ ಕುಳಾಯಿ ಉಪಸ್ಥಿತರಿದ್ದರು. ಲೇಖಕರಾದ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here