ಡಿಪ್ಲೋಮಾ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಡಾ. ಕೆ.ವಿ.ಜಿ. ಸ್ಕಾಲರ್‌ಶಿಪ್ ಟೆಸ್ಟ್

0

ರಾಜ್ಯದ ಎಲ್ಲೆಡೆಯಿಂದ ಹಾಗೂ ನೆರೆಯ ರಾಜ್ಯಗಳಿಂದಲೂ ಅತ್ಯದ್ಭುತ ಸ್ಪಂದನೆ

ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನಿಂದ ಬಡ ಮತ್ತು ಪ್ರತಿಭಾವಂತ ಹಾಗೂ ಎಂಜಿನಿಯರಿಂಗ್ (ಬಿ.ಇ.) ಶಿಕ್ಷಣಾಕಾಂಕ್ಷಿ ಡಿಪ್ಲೋಮಾ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ “ಡಾ. ಕೆ.ವಿ.ಜಿ. ಆನ್‌ಲೈನ್ ಸ್ಕಾಲರ್‌ಶಿಪ್ ಟೆಸ್ಟ್-2022” ಆ.19 ರಂದು ನಡೆಯಿತು. ಈ ಟೆಸ್ಟ್‌ಗೆ ಕರ್ನಾಟಕ ರಾಜ್ಯದ ಎಲ್ಲೆಡೆಯಿಂದ ಹಾಗೂ ನೆರೆಯ ರಾಜ್ಯಗಳಿಂದಲೂ ಅತ್ಯದ್ಭುತ ಸ್ಪಂದನೆ ದೊರೆತಿದೆ. ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗಗಳಿಂದಲೂ ೭೦೦ಕ್ಕೂ ಮಿಕ್ಕಿ ಡಿಪ್ಲೋಮಾ ವಿದ್ಯಾರ್ಥಿಗಳು ಈ ಆನ್‌ಲೈನ್ ಲಿಖಿತ ಪರೀಕ್ಷೆಯನ್ನು ತಮ್ಮ ತಮ್ಮ ಊರುಗಳಿಂದ-ನಿವಾಸಗಳಿಂದಲೇ ಬರೆದು ಡಾ. ಕೆ.ವಿ.ಜಿ.ಯವರ ಸ್ಮರಣಾರ್ಥ ನಡೆದ ಈ ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದಾರೆ.

ಈ ಪರೀಕ್ಷೆಯಲ್ಲಿ ಡಿಪ್ಲೋಮಾ ವಿವಿಧ ವಿಭಾಗಗಳಿಂದ ಸ್ಕಾಲರ್‌ಶಿಪ್ ಟೆಸ್ಟ್ ಬರೆದು ಆಯ್ಕೆಯಾದ ಮೊದಲ 22 ವಿದ್ಯಾರ್ಥಿಗಳು ಉಚಿತ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಅರ್ಹರಾಗಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಡಾ. ರೇಣುಕಾ ಪ್ರಸಾದ್ ಕೆ.ವಿ., ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಹಾಗೂ ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಇವರೆಲ್ಲರೂ ಕ್ಲಪ್ತ ಸಮಯದಲ್ಲಿ ಮುಂದಿಟ್ಟ ದಿಟ್ಟ ಹೆಜ್ಜೆ ಹಾಗೂ ಸೂಕ್ತ ಮಾರ್ಗದರ್ಶನ, ಸಲಹೆ-ಸೂಚನೆಗಳಿಂದಾಗಿ ಈ ಸ್ಕಾಲರ್‌ಶಿಪ್ ಟೆಸ್ಟ್ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಈ ಟೆಸ್ಟ್‌ನ ಯುಶಸ್ಸಿಗಾಗಿ ಒಗ್ಗಟ್ಟಿನಿಂದ ಹಗಲಿರುಳು ಶ್ರಮಿಸಿರುವ “ಡಾ. ಕೆ.ವಿ.ಜಿ. ಸ್ಕಾಲರ್‌ಶಿಪ್ ಟೆಸ್ಟ್ – ೨೦೨೨” ಈ ತಂಡದ ನೇತೃತ್ವ ವಹಿಸಿದ ಪ್ರೊ. ವಿಜಯ ಕುಮಾರ್ ಕಾಣಿಚ್ಚಾರ್, ವಿವಿಧ ವಿಭಾಗಗಳ ಪ್ರಾಧ್ಯಾಪಕ ವರ್ಗ ಹಾಗೂ ಬೋಧಕ-ಬೋಧಕೇತರ ಸದಸ್ಯರ ಕಾರ್ಯಕ್ಷಮತೆಯನ್ನು ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ಅಭಿನಂದಿಸಿದರು.