ಸುಬ್ರಹ್ಮಣ್ಯ:ಚಾತುರ್ಮಾಸ್ಯ ವೃತದ ಪ್ರಯುಕ್ತ ಚಿಂತಕರಿಂದ ಚಿಂತನ ಮಂಥನ

0

“ಸಾಮಾಜಿಕ ಸ್ವಸ್ಥ್ಯ ಕಾಪಾಡುವಲ್ಲಿ ಮಠಾಧಿಪತಿಗಳ ಜವಾಬ್ದಾರಿ” ಬಗ್ಗೆ ಶ್ರೀಗಳಿಂದ ಇಂದು ಪ್ರವಚನ

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ 26 ನೇ ಚಾತುರ್ಮಾಸ್ಯ ವೃತದ ಪ್ರಯುಕ್ತ ಸಾಂಸ್ಕೃತಿಕ ವೈಭವವಾಗಿ ಆ.2 ರಂದು ವೈಧಿಕ, ಪೌರಾಣಿಕ ಜನಪದ ಆಚರಣೆಗಳಲ್ಲಿ ಆಧುನಿಕತೆ ವರವೇ ?, ಶಾಪವೇ ?.ಎಂಬ ವಿಷಯದ ಬಗ್ಗೆ ಚಿಂತನ ಮಂಥನ ನಡೆಯಿತು. ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಸಮನ್ವಯಕಾರರಾಗಿ, ನಿವೃತ್ತ ಪ್ರಾಂಶುಪಾಲ ಮಾಧವ ಭಟ್ ಮತ್ತು ಅಂಬಿಕಾ ವಿದ್ಯಾಲಯ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಆಧುನಿಕತೆಯ ಪರವಾಗಿ ಹಾಗೂ ಸಂಸ್ಕೃತ ವಿದ್ವಂಸಕ ಶ್ರೀಶಕುಮಾರ್, ಪುರೋಹಿತ ಚಿಂತಕ ಶ್ರೀಕೃಷ್ಣ ಉಪಾದ್ಯಾಯ ಆಧುನಿಕತೆಯ ವಿರುದ್ಧವಾಗಿ ವಿಚಾರ ಮಂಡಿಸಿದರು. 

ಮಠದ ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥರು ಸಮಾರೋಪ ನುಡಿ ನುಡಿದರು. ಪರೀಕ್ಷಿತ್ ತೋಳ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಆ.24 ರಂದು ಸಂಜೆ
“ಮಹಾಭಾರತ ಗ್ರಂಥದಲ್ಲಿ ಬರುವ ಹೃದಯಸ್ಪರ್ಶಿ ಸನ್ನಿವೇಶಗಳು” ಎಂಬ ವಿಷಯದ ಮೇಲೆ ಶ್ರೀಗಳಿಂದ ಪ್ರವಚನ ನಡೆಯಿತು. ಬಳಿಕ ವಿದ್ವಾನ್ ವೈ ಅನಂತಪದ್ಮನಾಭ ಭಟ್ ಕಾರ್ಕಳ ರಿಂದ ಭಕ್ತ ಸುಧಾಮ ಹರಿಕಥಾ ಶ್ರವಣ ನಡೆಯಿತು. ಇಂದು ಸಂಜೆ “ಸಾಮಾಜಿಕ ಸ್ವಸ್ಥ್ಯ ಕಾಪಾಡುವಲ್ಲಿ ಮಠಾಧಿಪತಿಗಳ ಜವಾಬ್ದಾರಿ” ಬಗ್ಗೆ ಶ್ರೀಗಳಿಂದ ಪ್ರವಚನ ನಡೆಯಲಿದೆ. ಬಳಿಕ ಯಜ್ಞೇಶ್ ಆಚಾರ್ ರಿಂದ ದಾಸ ಸಂಕೀರ್ತನೆ ನಡೆಯಲಿದೆ.