ಐವರ್ನಾಡು ಶ್ರೀ ಪಂಚಲಿಂಗೇಶ್ವರನಿಗೆ ಪೂಗವನ ಕಲ್ಪವೃಕ್ಷ ಸೇವೆ

0

 

ಅಡಿಕೆ ಗಿಡ ನೆಡುವ ಬಗ್ಗೆ ಪೂರ್ವಭಾವಿ ಸಭೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರನಿಗೆ ಪೂಗವನ‌ ಕಲ್ಪವೃಕ್ಷ ಸೇವೆಯು ನಡೆಯಲಿದ್ದು ಅಡಿಕೆ ಗಿಡ ನೆಡುವ ಬಗ್ಗೆ ಪೂರ್ವಭಾವಿ ಸಭೆಯು ಆ.25 ರಂದು ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥರವರು ಮಾತನಾಡಿ ಈಗಾಗಲೇ ದೇವಸ್ಥಾನದ ಜಾಗದಲ್ಲಿ ಅಡಿಕೆ ಗಿಡ ನೆಡಲು ಅಡಿಕೆ ಗುಂಡಿಗಳನ್ನು ತೆಗೆದಿದ್ದು ಚೌತಿ ದಿನವಾದ ಆ.31 ರಂದು ಅಡಿಕೆ ಗಿಡಗಳನ್ನು ನೆಡಲು ನಿರ್ಧರಿಸಿದ್ದೇವೆ.
ಅಂದು ಎಲ್ಲರೂ ಬಂದು ಸಹಕರಿಸಬೇಕೆಂದು ಹೇಳಿದರು.
ಗಿಡ ನೆಡುವ ಮೊದಲಿನ ದಿನವೇ ಅಡಿಕೆ ಗಿಡಗಳನ್ನು ಲಾರಿಯಲ್ಲಿ ತರಲಾಗುವುದು.
ಲಾರಿಯಲ್ಲಿ ತಂದ ದಿನವೇ ಗಿಡಗಳನ್ನು ಅಡಿಕೆ ನೆಡುವ ಗುಂಡಿಗಳ ಸಮೀಪ ಕೊಂಡೋಗಿ ಇಡುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸೇರಿದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಮಾತನಾಡಿ ಈ ಬಾರಿಯ ತಾಲೂಕು ಮಟ್ಟದ ಖೋ ಖೋ ಕ್ರೀಡಾಕೂಟದಲ್ಲಿ ಐವರ್ನಾಡು ಹಿ.ಪ್ರಾ.ಶಾಲೆಗೆ ಅವಳಿ‌ ಪ್ರಶಸ್ತಿ ಬಂದಿದೆ ಇದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಮುಂದೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಐವರ್ನಾಡು ಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ಚಕ ಪದ್ಮನಾಭ ಭಟ್ ,ದಾಸಪ್ಪ ಗೌಡ ಕೋಡ್ತೀಲು, ಶ್ರೀಮತಿ ಪದ್ಮಾವತಿ ಖಂಡಿಗೆಮೂಲೆ , ಶ್ರೀಮತಿ ತಾರಾ ಆರ್.ರಾವ್.ಉದ್ದಂಪಾಡಿ, ದೇವಿದಾಸ ಕತ್ಲಡ್ಕ , ವಾಮನ ಗೌಡ ಕೋಂದ್ರಮಜಲು, ದಯಾನಂದ ಸಿ.ಎಚ್, ಕರಿಯಪ್ಪ ಕೋಡ್ತೀಲು,
ಹಾಗೂ ರಾಜಾರಾಮ ರಾವ್ ಉದ್ದಂಪಾಡಿ, ರವಿನಾಥ ಮಡ್ತಿಲ, ತಿಮ್ಮಪ್ಪ ಗೌಡ, ಶೇಖರ ಮಡ್ತಿಲ, ಬಾಲಕೃಷ್ಣ ಮಡ್ತಿಲ,ರಮೇಶ ಮಿತ್ತಮೂಲೆ, ಬೆಳ್ಯಪ್ಪ ಗೌಡ, ಶಿವಪ್ಪ ಗೌಡ ನೆಕ್ಕರೆಕಜೆ, ಶಾಂತಾರಾಮ ಕಣಿಲೆಗುಂಡಿ, ನಂದ‌ಕುಮಾರ್ ಬಾರೆತ್ತಡ್ಕ, ರಾಧಾಕೃಷ್ಣ ಚಾಕೋಟೆ
ದೇವಸ್ಥಾನದ ಸಿಬ್ಬಂದಿ ಯಶವಂತ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ರಾಮಚಂದ್ರ ಗೌಡ ಪಲ್ಲತ್ತಡ್ಕ ವಂದಿಸಿದರು.