ಆ. 31- ಸೆ. 1: ಎಣ್ಮೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ

0

ಎಣ್ಮೂರು ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಎಣ್ಮೂರು ಕೋಟಿಚೆನ್ನಯ ನಗರದಲ್ಲಿರುವ ಶ್ರೀ ಸೀತಾ ರಾಮಾಂಜನೇಯ ಭಾರತಿ ಮಂದಿರದ ವಠಾರದಲ್ಲಿ ನಡೆಯಲಿರುವುದು. ಆಗಸ್ಟ್ 31 ರಂದು ಬೆಳಿಗ್ಗೆ ಧ್ವಜಾರೋಹಣದ ಬಳಿಕ ಗಣಪತಿ ಪ್ರತಿಷ್ಠೆ ಮತ್ತು ಗಣಹವನ ಮಹಾಪೂಜೆ, ಸಂಜೆ ಭಜನಾ ಕಾರ್ಯಕ್ರಮ, ಮಹಾಪೂಜೆ ನಡೆಯಲಿರುವುದು. ಸೆ. 1 ರಂದು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಬೆಳಿಗ್ಗೆ ಸೇವಾಕಾಂಕ್ಷಿಗಳಿಂದ ಮಹಾಪೂಜೆ, ಸಾಮೂಹಿಕ ಗಣಹವನ, ಪುಟಾಣಿಗಳಿಂದ ಅಕ್ಷರಾಭ್ಯಾಸ ಭಜನಾ ಕಾರ್ಯಕ್ರಮ, ದೇವರಿಗೆ ಮಹಾಪೂಜೆ , ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರಸಾದ ವಿತರಣೆ, ಅನ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿರುವುದು.
ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿರುವರು. ಎಣ್ಮೂರು ಗರಡಿ ಆನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಧಾರ್ಮಿಕ ಉಪನ್ಯಾಸ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್ . ಪ್ರಸಾದ್, ಎಡಮಂಗಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ರೇವತಿ ಎಣ್ಮೂರು ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿಕಲ್ಲು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಚಿದಾನಂದ ರೈ ಉಪಸ್ಥಿತರಿರುವರು. ಬಳಿಕ ಶ್ರೀ ಮಹಾಗಣಪತಿ ದೇವರ ವೈಭವದ ಶೋಭಾಯಾತ್ರೆ ನಡೆಯಲಿರುವುದು. ಪಡ್ಪಿನಂಗಡಿ ಶ್ರೀ ವಿನಾಯಕ ಮಂದಿರದ ಬಳಿ ಸಾರ್ವಜನಿಕರಿಂದ ಪೂಜೆಸೇವೆಗಳು ನಡೆದ ಬಳಿಕ ಕಲ್ಲೇರಿಯಲ್ಲಿ ಶ್ರೀಮಹಾಗಣಪತಿ ದೇವರ ಕಟ್ಟೆ ಪೂಜೆ ಮೂರ್ತಿ ಜಲಸ್ತಂಭನ ಧ್ವಜ ಅವತರಣ ಕಾರ್ಯಕ್ರಮ ನಡೆಯಲಿರುವುದು.