ಅಮರಮುಡ್ನೂರಿನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳಿಗೆ ಸಮಗ್ರ ದ್ವಿತೀಯ

ದ.ಕ.ಜಿ.ಪ. ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಅಮರಪಡ್ನೂರಿನಲ್ಲಿ ನಡೆದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಥಮಿಕ ವಿಭಾಗದ ಕಿರಿಯ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ತನ್ವಿ- ಭಕ್ತಿ ಗೀತೆ (ಪ್ರಥಮ), ಪ್ರಾರ್ಥನಾ- ಭಕ್ತಿಗೀತೆ (ಪ್ರಥಮ), ಜೇಷ್ಮಾ – ಕಥೆ ಹೇಳುವುದು (ದ್ವಿತೀಯ), ಲೇಖನ್- ಛದ್ಮವೇಷ (ತೃತೀಯ), ರಕ್ಷಾ – ಇಂಗ್ಲಿಷ್ ಕಂಠಪಾಠ (ತೃತೀಯ), ಜಾಹ್ನವಿ – ಕಥೆ ಹೇಳುವುದು (ಪ್ರಥಮ) ಅಭಿನಯ ಗೀತೆ (ತೃತೀಯ), ಪ್ರಾರ್ಥನಾ – ಹಿಂದಿ ಕಂಠಪಾಠ (ದ್ವಿತೀಯ), ಅದ್ವೈತ್ – ಕ್ಲೇ ಮಾಡೆಲಿಂಗ್ (ದ್ವಿತೀಯ) ಪಡೆದುಕೊಂಡಿದ್ದಾರೆ.