ಬೆಳ್ಳಾರೆ ಪೊಲೀಸ್ ಠಾಣಾ ವತಿಯಿಂದ ಬೆಳ್ಳಾರೆಯಲ್ಲಿ ಶಾಂತಿ ಸಭೆ

0

 

ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಹಬ್ಬ ಆಚರಿಸಿ – ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್

ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ವತಿಯಿಂದ ಸಾರ್ವಜನಿಕ ಶಾಂತಿ ಸಭೆಯನ್ನು ಆ.25 ರಂದು ನಡೆಯಿತು.
ಸುಳ್ಯ ವೃತ್ತ ನಿರೀಕ್ಷಕರಾದ ನವೀನಚಂದ್ರ ಜೋಗಿಯವರು ಸ್ವಾಗತಿಸಿ ಮಾತನಾಡಿ ಬೆಳ್ಳಾರೆ ಯಲ್ಲಿ ಇತ್ತೀಚೆಗೆ ಎರಡು ಅಹಿತಕರ ಘಟನೆಗಳು ನಡೆದು ಹೋಗಿವೆ ಹಬ್ಬಗಳು ಹತ್ತಿರ ಬರುತ್ತಿದೆ ಈ ನಿಟ್ಟಿನಲ್ಲಿ ಶಾಂತಿ ಸಭೆಯನ್ನು ಕರೆದಿದ್ದೇವೆ.
ಪ್ರತಿವರ್ಷದಂತೆ ಈ ವರ್ಷವೂ ಹಬ್ಬಗಳು ಶಾಂತಿಯುತವಾಗಿ ನಡೆಯಬೇಕು.
ಸಂಘಟನೆಗಳು ಸಮಾಜವನ್ನು ಒಟ್ಟುಗೂಡಿಸುವಂತಿರಬೇಕು .ಎಲ್ಲಾ ಜಾತಿ ಧರ್ಮದವರು ಹಬ್ಬವನ್ನು ಇಲಾಖೆಯ ನಿಯಮ ಪ್ರಕಾರವೇ ಆಚರಿಸಬೇಕು ಎಂದು ಹೇಳಿದರು.
ಡಿವೈಎಸ್ಪಿ ವೀರಯ್ಯ ಹಿರೇಮಠ್ ರವರು ಮಾತನಾಡಿ ಎಲ್ಲರೂ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಹಬ್ಬವನ್ನು ಆಚರಿಸಬೇಕು.
ಹಬ್ಬದ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ.ಬಾಕ್ಸ್ ಹಾಕಬಹುದು.
ಪಟಾಕಿ ಸಿಡಿಸಲು ಅವಕಾಶ ಇಲ್ಲ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಒಳ್ಳೆಯ ರೀತಿಯಲ್ಲಿ ಹಬ್ಬಗಳನ್ನು ಆಚರಿಬೇಕೆಂದು ಹೇಳಿದರು.
ವೇದಿಕೆಯಲ್ಲಿ ಬೆಳ್ಳಾರೆ ಠಾಣೆಯ ಎಸ್.ಐ.ಸುಹಾಸ್, ಮಾತನಾಡಿದರು.
ವಿಶ್ವನಾಥ ರೈ ಕಳಂಜ , ಗಫೂರ್ ಕಲ್ಮಡ್ಕ, ಆನಂದ ಬೆಳ್ಳಾರೆ, ಶರೀಫ್ ಭಾರತ್ ಬಾಳಿಲ, ವಸಂತ ಉಲ್ಲಾಸ್, ಜಯರಾಮ ಉಮಿಕ್ಕಳ, ಪ್ರೇಮಚಂದ್ರ ಬೆಳ್ಳಾರೆ,ಸುಬ್ರಾಯ ಗೌಡ ಪಾಲ್ತಾಡಿ ಮತ್ತಿತರರು ಮಾತನಾಡಿದರು.
ಸಭೆಯಲ್ಲಿ ಧಾರ್ಮಿಕ‌ ಮುಖಂಡರು, ಸಂಘ,ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಬೆಳ್ಳಾರೆ ಠಾಣೆಯ ಕ್ರೈಂ ಎಸ್.ಐ.ಆನಂದರವರು ವಂದಿಸಿದರು.