ಚಿನ್ನಪ್ಪ ಗೌಡ ಕರ್ಲಪ್ಪಾಡಿಯವರಿಗೆ ಎ.ಎಸ್.ಐ. ಆಗಿ ಪದೋನ್ನತಿ

0

 

 

ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಚಿನ್ನಪ್ಪ ಗೌಡರಿಗೆ ಎಎಸ್ಐ ಆಗಿ ಪದೋನ್ನತಿಗೊಂಡಿದ್ದು ಅವರು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

1994ರಲ್ಲಿ ಕಾನ್ ಸ್ಟೇಬಲ್ ಆಗಿ ಸರಕಾರಿ ಸೇವೆಗೆ ಸೇರಿದ ಚಿನ್ನಪ್ಪ ಗೌಡರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಆರಂಭದ ಸೇವೆ ಸಲ್ಲಿಸಿದರು. ಬಳಿಕ ಮಂಗಳೂರು ಪೂರ್ವ (ಕದ್ರಿ) ಠಾಣೆ, ಮಂಗಳೂರು ಗ್ರಾಮಾಂತರ ಠಾಣೆ, ಸುಬ್ರಹ್ಮಣ್ಯ ಫೋಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದರು. ಸುಬ್ರಹ್ಮಣ್ಯದಲ್ಲಿರುವಾಗ 2004ರಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಮುಂಬಡ್ತಿಗೊಂಡ ಇವರು ಕಡಬ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡರು. ಬಳಿಕ ಪುತ್ತೂರು ನಗರ ಠಾಣೆಯಲ್ಲಿಯೂ ಸೇವೆ ಸಲ್ಲಿಸಿದರು. ಇದೀಗ ಎಎಸ್ಐ ಯಾಗಿ ಪದೋನ್ನತಿಗೊಂಡಿರುವ ಅವರು ಬೆಳ್ತಂಗಡಿ ಸಂಚಾರ ಠಾಣೆಗೆ ವರ್ಗಾವಣೆಗೊಂಡು ಆ.25ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಅಜ್ಜಾವರ ಗ್ರಾಮದ ಕರ್ಲಪ್ಪಾಡಿಯವರಾದ ಚಿನ್ನಪ್ಪ ಗೌಡರು ಅರಂತೋಡಿನ ಗುಂಡ್ಲದಲ್ಲಿ ವಾಸವಿದ್ದಾರೆ.
ಪತ್ನಿ ಕಲಾವತಿ ಗೃಹಿಣಿಯಾಗಿದ್ದಾರೆ.
ಹಿರಿಯ ಪುತ್ರಿ ಗುಣಶ್ರೀ ಎಂ.ಬಿ.ಎ.‌ಪದವೀಧರೆ, ಇನ್ನೋರ್ವ ಪುತ್ರಿ ಗಾನಶ್ರೀ ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಕಾನೂನು ಪದವಿ ಓದುತ್ತಿದ್ದಾರೆ. ಮಗ ಗಗನ್ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.