ರೈತರ ನೀರಾವರಿ ಪಂಪ್ ಸೆಟ್ಟಿನ ವಿದ್ಯುತ್ ಹಳೆ ಬಾಕಿ ಶುಲ್ಕ ಮನ್ನಾ ಮಾಡುವಂತೆ ಭಾರತೀಯ ಕಿಸಾನ್ ಸಂಘದಿಂದ ಸಚಿವರಿಗೆ ಮನವಿ

0

 

 

ಸುಳ್ಯ ತಾಲೂಕಿನ ನೀರಾವರಿ ಕೃಷಿ ಪಂಪ್ ಸೆಟ್ಟುಗಳ ಹಿಂದಿನ ಅಂದರೆ ಎಪ್ರಿಲ್ 2003ರಿಂದ 2008 ರ ಅವಧಿಯ ವಿದ್ಯುತ್ ಶುಲ್ಕ ಬಾಕಿಯನ್ನು ಮನ್ನಾ ಮಾಡುವ ಬಗ್ಗೆ ಆ. 24ರಂದು ಭಾರತೀಯ ಕಿಸಾನ್ ಸಂಘ, ಸುಳ್ಯ ತಾಲೂಕಿನ ಸದಸ್ಯರ ನಿಯೋಗವು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಇಂಧನ ಸಚೀವರಾದ ವಿ. ಸುನಿಲ್ ಕುಮಾರ್ ರನ್ನು ಕಾರ್ಕಳದ ಶಾಸಕರ ಕಛೇರಿಯಲ್ಲಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ಸಚಿವರು ಮೆಸ್ಕಾಂ ಆಢಳಿತ ನಿರ್ದೇಶಕರ ಜೊತೆ ವಿಮರ್ಶಿಸಿ ಮನ್ನಾ ಮಾಡುವ ಭರವಸೆಯನ್ನು ನೀಡಿದರು.


ನಿಯೋಗದಲ್ಲಿ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಅಧ್ಯಕ್ಷರಾದ ಎನ್. ಜಿ. ಪ್ರಭಾಕರ ರೈ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಕಾರ್ಯದರ್ಶಿ ಬಿ. ಸಾಯಿಶೇಖರ್, ಖಜಾಂಚಿ ಕೆ. ಸೀತಾರಾಮ್, ನಿಕಟಪೂರ್ವ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಭಟ್ ನೆಟ್ಟಾರು, ಸದಸ್ಯರಾದ ಗೋಪಾಲಕೃಷ್ಣ ಭಟ್ ಕರುವಂಕಲ್ಲು, ಗಬ್ಬಲಡ್ಕ ಸದಾಶಿವ ಭಟ್, ಯತಿರಾಜ್ ಓಣಿಯಡ್ಕ ಭಾಗವಹಿಸಿದ್ದರು.
ಅದೇ ದಿನ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ರಾಮಚಂದ್ರರನ್ನು ಭೇಟಿ ಮಾಡಿ ಸುಳ್ಯ ತಾಲೂಕಿನ ನಿಂತಿಕಲ್ಲು ಸಮೀಪ ಕುಳಾಯಿತ್ತೋಡಿಯಲ್ಲಿ ಸ್ಥಾಪನೆಯಾಗಬೇಕಾದ 33 ಕೆ. ವಿ. ಉಪ ವಿದ್ಯುತ್ ಕೇಂದ್ರದ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು.