ಪಂಜ: ಫ್ರೆಂಡ್ಸ್ ಸರ್ಕಲ್ ವತಿಯಿಂದ ಶಾಲೆಯ ಪಂಪ್ ಖರೀದಿಗೆ ದೇಣಿಗೆ ಹಸ್ತಾಂತರ

0

 

 

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಬೋರ್ವೆಲ್ ಪಂಪ್ ಖರೀದಿಗೆ
ಫ್ರೆಂಡ್ಸ್ ಸರ್ಕಲ್ ಕೃಷ್ಣ ನಗರ ಪಂಜ ಇದರ ವತಿಯಿಂದ ರೂ.27500 ದೇಣಿಗೆಯ ಹಸ್ತಾಂತರ ಕಾರ್ಯಕ್ರಮ ಆ.25 ರಂದು ಜರುಗಿತು. ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಡಾ|ದೇವಿಪ್ರಸಾದ್ ಕಾನತ್ತೂರ್, ಕಾರ್ಯದರ್ಶಿ ಲಿಗೋಧರ ಆಚಾರ್ಯ,ಪೂರ್ವಾಧ್ಯಕ್ಷರಾದ ನಾರಾಯಣ ಕೃಷ್ಣನಗರ, ಚೆನ್ನಕೇಶವ ಆಚಾರ್ಯ ರವರು ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ನೇರಳ, ಮತ್ತು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾ ಕುಮಾರಿ ರವರಿಗೆ ದೇಣಿಗೆಯನ್ನು ಹಸ್ತಾಂತರಿಸಿದರು, ಎಸ್ .ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ ನೆಕ್ಕಿಲ ಸದಸ್ಯರಾದ ದೇವಿಪ್ರಸಾದ್ ಜಾಕೆ, ಗೋಪಾಲಕೃಷ್ಣ ಸಂಕಡ್ಕ, ಪುರುಷೋತ್ತಮ, ಶ್ರೀಮತಿ ಪ್ರಮೀಳಾ,ಶ್ರೀಮತಿ
ಗೀತಸುಧಾ, ಶ್ರೀಮತಿ
ಧನಲಕ್ಷ್ಮೀ,ಶ್ರೀಮತಿ
ಸೌಮ್ಯಶ್ರೀ, ಶ್ರೀಮತಿ
ನಮಿತಾ, ಶ್ರೀಮತಿ
ಶಶಿಕಲಾ,ರಮ್ಲತ್, ಮೊದಲಾದವರು ಉಪಸ್ಥಿತರಿದ್ದರು.