ಟೈಲರ್ಸ್ ಎಸೋಸಿಯೇಶನ್ ಗುತ್ತಿಗಾರು ವಲಯದ ಸಾಮಾನ್ಯ ಸಭೆ

0

 

ಪ್ರಾಕೃತಿಕ ವಿಕೋಪದಲ್ಲಿ ಮನೆ- ಮಕ್ಕಳನ್ನು ಕಳೆದುಕೊಂಡ ಸದಸ್ಯೆಗೆ ಧನಸಹಾಯ ವಿತರಣೆ

ಟೈಲರ್ಸ್ ಎಸೋಸಿಯೇಶನ್ ನ ಗುತ್ತಿಗಾರು ವಲಯದ ಸಾಮಾನ್ಯ ಸಭೆಯು ವಲಯದ ಅಧ್ಯಕ್ಷ ಗಂಗಾಧರ ಎಚ್ ಇವರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿನ ರಾಜೀವ ಗಾಂಧಿ ಸಭಾಭವನದಲ್ಲಿ ಆ. 25 ರಂದು ಜರುಗಿತು.

ಕಳೆದ ತಿಂಗಳು ಪ್ರಕೃತಿ ವಿಕೋಪದಲ್ಲಿ ಇಬ್ಬರು ಪುಟ್ಟ ಮಕ್ಕಳು ಹಾಗೂ ಮನೆಯನ್ನು ಕಳೆದುಕೊಂಡಿರುವ ವಲಯದ ಸದಸ್ಯೆ ಶ್ರೀಮತಿ ರೂಪಶ್ರೀ ಅವರ ಮನೆಗೆ ಹೋಗಿ ಅವರಿಗೆ ಎರಡು ಲಕ್ಷದ ಮೂವತ್ತೆರಡು ಸಾವಿರದ ಎಂಟು ನೂರ ಎಂಬತ್ತೆಂಟು(2,32,888)ರೂಪಾಯಿ ಚೆಕ್ ಮುಖಾಂತರ ನೀಡಲಾಯಿತು.

ಸಭೆಯಲ್ಲಿ , ನಿಕಟಪೂರ್ವ ರಾಜ್ಯಾಧ್ಯಕ್ಷ ಕೆ ಎಸ್ ಆನಂದ, ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್ ಬಿ, ಕೆಎಸ್‌ಟಿಎ ರಾಜ್ಯ ಸಮಿತಿ ಉಪಾಧ್ಯಕ್ಷ
ಸುರೇಶ್ ಸಾಲ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ
ಜಯಂತ್ ಉರ್ಲಾಂಡಿ, ಪ್ರಧಾನ ಕಾರ್ಯದರ್ಶಿ ಲಿಗೋದರ್ ಕೆ, ಕೋಶಾಧಿಕಾರಿ
ಈಶ್ವರ್ ಕುಲಾಲ್‌,
ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ
ದಿವಾಕರ್.ಟಿ, ಪ್ರಧಾನ ಕಾರ್ಯದರ್ಶಿ ಆಶಾ ವಿ.ರೈ, ಉಪಾಧ್ಯಕ್ಷ ರವೀಂದ್ರ ಡಿ,
ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ
ನಾಗೇಶ್ ಎಂ,ಪ್ರಧಾನ ಕಾರ್ಯದರ್ಶಿ ಯಾದೇಶ್ ತುಂಬೆ, ಮುಲ್ಕಿ ಮೂಡಬಿದ್ರೆ ಕ್ಷೇತ್ರ ಸಮಿತಿ ಕಾರ್ಯದರ್ಶಿ ದಾಮೋದರ್ ಶೆಟ್ಟಿಗಾರ್, ಉರ್ವ ವಲಯ ಅಧ್ಯಕ್ಷ
ಉದಯಕುಮಾರ್ ಕೋಡಿಕಲ್,ಉರ್ವ ವಲಯ ನಿಕಟಪೂರ್ವ ಅಧ್ಯಕ್ಷ ಜಯಪ್ರಕಾಶ್, ಕಿನ್ನಿಗೋಳಿ ವಲಯ ನಿಕಟ ಪೂರ್ವ ಅಧ್ಯಕ್ಷ ಚಂದ್ರಹಾಸ ಕೋಟ್ಯಾನ್, ಸುಳ್ಯ ವಲಯ ಅಧ್ಯಕ್ಷ ಕುಸುಮಾಧರ ರೈ,
ಗುತ್ತಿಗಾರು ವಲಯ ಕಾರ್ಯದರ್ಶಿ
ವೆಂಕಟರಮಣ ಎ, ಗುತ್ತಿಗಾರು ವಲಯ ಕೋಶಾಧಿಕಾರಿ
ಮಾಧವ ಶೆಟ್ಟಿಗಾರ್ ಎನ್,
ಹಾಗೂ ವಲಯದ ಸದಸ್ಯರು ಭಾಗವಹಿಸಿದರು.

ಸಭೆಯ ಬಳಿಕ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಲಾಯಿತು.

(ವರದಿ ಡಿ.ಎಚ್)