ಸುಳ್ಯದ ವಸ್ತ್ರ ಮಳಿಗೆಯಿಂದ ಕಳವು

0

ಸುಳ್ಯ ಬಾಳೆಮಕ್ಕಿಯಲ್ಲಿರುವ ಸನ್ ರೇ ರೆಡಿ ಮೇಡ್ ವಸ್ತ್ರ ಮಳಿಗೆಯಿಂದ ಅ.25 ರಂದು ರಾತ್ರಿ ಕಳವಾದ ಘಟನೆ ನಡೆದಿದೆ.

ಮುಖ್ಯ ರಸ್ತೆಯ ಬಾಳೆಮಕ್ಕಿ ಅಬ್ಬಾಸ್‌ರವರ ವಸ್ತ್ರಮಳಿಗೆಯಿಂದ ಅ.25  ರಂದು ಅಂಗಡಿಯ ಹಂಚು ಸರಿಸಿ ಕಳ್ಳರು ನುಗ್ಗಿ ಡ್ರವರ್ ನಲ್ಲಿದ್ದ ಮೂವತ್ತು ಸಾವಿರ ನಗದು ಕಳವುಗೈದಿದ್ದಾರೆ. ಮಾಲಕರು ಬೆಳಿಗ್ಗೆ ಬಂದು ಅಂಗಡಿ ತೆರೆಯುವಾಗ ಈ ಘಟನೆ ಗೊತ್ತಾಗಿದೆ ಎಂದು ತಿಳಿದು ಬಂದಿದೆ.