ಆಹಾರ ಸಾತ್ವಿಕವಾಗಿದ್ದರೆ ಮನಸ್ಸು, ದೇಹ ಎರಡೂ ಸಾತ್ವಿಕ, ಮಠಾಧಿಪತಿಗಳು ಸಂಸ್ಕಾರ ಜಾಗೃತಿ ಮಾಡಬೇಕು : ವಿದ್ಯಾಪ್ರಸನ್ನ ಶ್ರೀ

0

 

” ಆಹಾರ ಸಾತ್ವಿಕವಾಗಿದ್ದರೆ ಮನಸ್ಸು, ದೇಹ ಎರಡೂ ಸಾತ್ವಿಕ, ಮಠಾಧಿಪತಿಗಳು ಸಂಸ್ಕಾರ ಜಾಗೃತಿ ಮಾಡಬೇಕಾಗಿದೆ ಎಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧಿಪತಿ ಶ್ರೀ ವಿದ್ಯಾ ಪ್ರಸನ್ನ ಶ್ರೀಗಳು “ಸಾಮಾಜಿಕ ಸ್ವಸ್ಥ್ಯ ಕಾಪಾಡುವಲ್ಲಿ ಮಠಾಧಿಪತಿಗಳ ಜವಾಬ್ದಾರಿ” ಬಗ್ಗೆ ಆ.೨೫ ರಂದು ಪ್ರವಚನ ನೀಡುತ್ತಾ ಕರೆಯಿತ್ತರು.

 

ಮನುಷ್ಯನಿಗೆ ಆದಿ ವ್ಯಾದಿ ಎರಡೂ ಸ್ವಸ್ಥ್ಯ ಬೇಕು. ಅಂದರೆ ಮಾನಸಿಕ ಮತ್ತು ದೈಹಿಕ ಎರಡೂ ಆರೋಗ್ಯ ಬೇಕಾಗುತ್ತದೆ. ಮಾನಸಿಕ ಆರೋಗ್ಯ ಇದ್ದರೆ ದೈಹಿಕ ಆರೋಗ್ಯ ಕಾಪಾಡಬಹುದು. ಪರಂಪರೆಯಿಂದ ಆದಿ ನಿವಾರಣೆ ಆದರೆ ದೈಹಿಕ ಆರೋಗ್ಯ ಪಡೆಯಬಹುದಾಗಿದೆ. ಉಸಿರು ಮನುಷ್ಯನ ಪ್ರಾಯ ನಿರ್ಧರಿಸಿತ್ತದೆ. ಪ್ರಾಣಾಯಾಮ ಮಾಡಿ ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ. ಆಹಾರವು ಅಷ್ಟೆ ಸಾತ್ವಿಕವಾಗಿದ್ದರೆ ಅದು ಮಾನಸಿಕವಾಗಿ ಸಾತ್ವಿಕತೆಗೆ ಸಹಕಾರಿಯಾಗುವುದು. ಸಾತ್ವಿಕತೆ ಎಲ್ಲಾ ವಿಧದಲ್ಲೂ ಬೇಕು. ಶಾರಾಬು ಅಂಗಡಿಗೆ ತೆರಳುವಾತ ತನ್ನ ಮಕ್ಕಳಿಗೆ ಪತ್ನಿಗೆ ಕೊಡಬೇಕಾದ ಹಣವನ್ನು ಶರಾಬು ಅಂಗಡಿಯವನಿಗೆ ನೀಡಿದರೆ ಮಕ್ಕಳು, ಹೆಂಡತಿ ಹಾಕುವ ಕಣ್ಣೀರು ಶಾರಾಬು ಅಂಗಡಿಯವನು ನೀಡುವ ಅನ್ನವನ್ನು ನಾವು ಸ್ವೀಕರಿಸಿದಾಗ ಮಧ್ಯ ವ್ಯಸನಿಯ ಮನೆಯವ ಕಣ್ಣೀರಿನ ಫಲ ನಮಗೆ ತಟ್ಟ ಬಹುದಾಗಿದೆ. ನಾವು ಉಣ್ಣುವ ಒಂದು ಅನ್ನದಲ್ಲಿ ಪರಿಸರದ ಹಲವು ಜೀವಿಗಳಿಗೆ ತೊಂದರೆ ಅನುಭವಿಸಿರಬಹುದು. ಆದ ಕಾರಣ ಅನ್ನದ ಮೊದಲು ಒಂದು ಹಿಡಿ ಅಕ್ಕಿ ದಾನಕ್ಕಾಗಿ, ಊಟದ ಮೊದಲು ದೇವರಿಗೆ ಸಮರ್ಪಣೆ ಆಗುವುದು ಪಾಪ ತೊಳೆಯಲು ಇರುವ ಸಂಸ್ಕಾರ.


ನೆರೆ ರಾಷ್ಟ್ರ ಪಾಕಿಸ್ತಾನ ನೇರ ದಾಳಿಯಲ್ಲಿ ಭಾರತವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ಅದಕ್ಕಾಗಿ ಅನ್ಯ ರಾಷ್ಟ್ರಗಳು ಅನ್ಯ ಧಾರಿ ಹಿಡಿದು ನಮ್ಮ ದೇಶದ ಯುವಕರಿಗೆ ಮಾದಕ ವಸ್ತುಗಳನ್ನು ತಿನ್ನಿಸಿ ಅಡ್ಡದಾರಿ ಹಿಡಿಸಲು ಪಯತ್ನ ಪಡುತ್ತಿದೆ. ಮಠಾಧಿಪತಿಗಳು ಅಷ್ಟೇ ಸಂಸ್ಕಾರ ಜಾಗೃತಿ ಮಾಡಬೇಕಾಗಿದೆ. ಮನೆ ಮನೆಯಲ್ಲಿ ಸಂಸ್ಕಾರ ಜಾಗೃತಿ ಮೂಡಬೇಕಾಗಿದೆ. ಮಠಾಧಿಪತಿಗಳು ಧಾರ್ಮಿಕ ಉಪನ್ಯಾಸ, ಧಾರ್ಮಿಕ ಕಾರ್ಯಕ್ರಮ, ಸಂಸ್ಕಾರ ಜಾಗೃತಿ ಕಾರ್ಯ ಮಾಡಬೇಕಾಗಿದೆ. ಸಂಸ್ಕಾರ ಉದಾಹರಣೆಯಾಗಿ ನಮಸ್ಕಾರದ ಮಹತ್ವವೇ ಸಾಕು. ಹಸ್ತದಲ್ಲಿ ಧನ್ವಂತರಿ ಶಕ್ತಿ ಭಗವಂತ ತುಂಬಿಸಿರುತ್ತಾನೆ. ಆದ ಕಾರಣ ಮನುಷ್ಯ ಶೇಕ್ ಹ್ಯಾಂಡ್ ಮಾಡುವುದಕ್ಕಿಂತ ನಮಸ್ಕಾರ ಮಾಡುವುದು ಒಳ್ಳೆಯದು. ಮಠಾಧಿಪತಿಗಳು ಮಂತ್ರಾಕ್ಷತೆ ನೀಡುವ ಉದ್ದೇಶವು ಅದೇ ಆಗಿರುತ್ತದೆ. ಧ್ಯಾನ, ಅರ್ಚನೆ, ಆಚರಣೆ ಮೂಲಕ ಪಡೆದ ಶಕ್ತಿ ಹಸ್ತದಲ್ಲಿರುವ ಮೂಲಕ ಭಕ್ತರಿಗೆ ಮಂತ್ರಾಕ್ಷತೆ ಮೂಲಕ ದೊರೆಯುತ್ತದೆ ಎಂದವರು ತಿಳಿಸಿದರು.
ಬಳಿಕ ಯಜ್ಞೇಶ್ ಆಚಾರ್ ರಿಂದ ದಾಸ ಸಂಕೀರ್ತನೆ ನಡೆಯಿತು.