ಮುರುಳ್ಯ ಎಣ್ಮೂರು ಸಹಕಾರಿ ಸಂಘಕ್ಕೆ ಡಿ.ಸಿ.ಸಿ. ಬ್ಯಾಂಕ್ ಪ್ರೋತ್ಸಾಹಕ ಪ್ರಶಸ್ತಿ

0

 

ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿ.ಸಿ.ಸಿ ಬ್ಯಾಂಕಿನಿಂದ 2021-22ನೇ ಸಾಲಿನ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ. ಸಂಘದ ಅಧ್ಯಕ್ಷ ವಸಂತ ಹುದೇರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್ ಪ್ರಶಸ್ತಿ ಸ್ವೀಕರಿಸಿದರು.

ದ.ಕ‌. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳೆಜ್ಜ ಪ್ರಶಸ್ತಿ ಪ್ರದಾನಗೈದರು. ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ, ಮಾಜಿ ಅಧ್ಯಕ್ಷ ಕೆ.ಎನ್. ರಘುನಾಥ ರೈ ಕಟ್ಟಬೀಡು, ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ರೈ ಊರುಸಾಗು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.