ಸಂಪಾಜೆ : ಗೂನಡ್ಕ ಪೇರಡ್ಕ ತೆಕ್ಕಿಲ್ ಕುಟುಂಬಸ್ತರ ಒಕ್ಕೂಟದಿಂದ ಪ್ರವಾಹದಿಂದ ಸಂಕಷ್ಟಕ್ಕೀಡಾದ ಹಫಿಲ್ ಪೇರಡ್ಕ ಕುಟುಂಬಕ್ಕೆ ಸಹಾಯಧನ

0

 

 

ಸಂಪಾಜೆ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ನೆರೆ ಪ್ರವಾಹಕ್ಕೆ ಸಿಲುಕಿ ಹಾನಿಯಾದ ಗೂನಡ್ಕ ಪೇರಡ್ಕ ತೆಕ್ಕಿಲ್ ಸಫಿಯ ಅವರ ಮನೆಯು ಸಂಪೂರ್ಣ ಜಲಾವೃತಗೊಂಡು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಬಟ್ಟೆ ಬರೆಗಳು ಕೊಚ್ಚಿ ಹೋಗಿ ಭಾರಿ ನಷ್ಟ ಉಂಟಾಗಿದ್ದು ಇದನ್ನು ಮನಗೊಂಡು ತೆಕ್ಕಿಲ್ ಕುಟುಂಬಸ್ತರ ಒಕ್ಕೂಟ ಸಂಗ್ರಹಿಸಿದ ಹಣ ರೂ. 55 ಸಾವಿರ ಮೊತ್ತದ ಸಹಾಯಧನವನ್ನು ಹಾಫಿಳ್ ರವರಿಗೆ ತೆಕ್ಕಿಲ್ ಕುಟುಂಬಸ್ಥರ ಪರವಾಗಿ ಸಮಿತಿಯ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಹಾಫಿಳ್ ರವರ ಗೂನಡ್ಕದ ಪೇರಡ್ಕ ಮನೆಯಲ್ಲಿ ಇಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತೆಕ್ಕಿಲ್ ಕುಟುಂಬಸ್ಥರ ಒಕ್ಕೂಟದ ಉಪಾಧ್ಯಕ್ಷರದ ಟಿ.ಬಿ. ಅಬ್ದುಲ್ಲ ತೆಕ್ಕಿಲ್ ದರ್ಕಾಸ್ ಗೂನಡ್ಕ, ಸಲಹಾ ಸಮಿತಿಯ ಸದಸ್ಯರಾದ ಟಿ ಎಂ ರಝಾಕ್ ಹಾಜಿ ತೆಕ್ಕಿಲ್, ಕೌನ್ಸಿಲ್ ಸದಸ್ಯ ಜುರೈದ್ ತೆಕ್ಕಿಲ್ ಪೇರಡ್ಕ, ಕುಟುಂಬದ ಹಿರಿಯರಾದ ಟಿ ಎಂ ಉಮ್ಮರ್ ತೆಕ್ಕಿಲ್ ಪೇರಡ್ಕ, ಸಾಧುಮಾನ್ ತೆಕ್ಕಿಲ್ ಪೇರಡ್ಕ, ಉಸ್ಮಾನ್ ಅರಂತೋಡು ಉಪಸ್ಥಿತರಿದ್ದರು.