ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷ  ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ. ನಡೆಯಿತು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು, ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಯಿತು ಸರಕಾರದ ಸುತ್ತೋಲೆ ಸಭೆಯಲ್ಲಿ ಮಂಡಿಸಲಾಯಿತು.

 

ಸಭೆಯಲ್ಲಿ ವಿಶೇಷವಾಗಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಹಕರಿಸಿದವರಿಗೆ ಹಾಗೂ ಸಭಾಭವನ ನೀಡಿ ಸಂಪೂರ್ಣ ಸಹಕಾರ ನೀಡಿದ ಸಜ್ಜನ ಪ್ರತಿಷ್ಠಾನದವರಿಗೆ ಅಭಿನಂದನೆ ಸಲ್ಲಿಸಲಾಯಿತು.. ಕೆಲವು ನಿರ್ಣಯ ಕೈಗೊಂಡು ಸಂಬಂಧಪಟ್ಟವರಿಗೆ ಕಳುಹಿಸಲು ತೀರ್ಮಾನಿಸಲಾಯಿತು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಗ್ರಾಮದ ಹಲವು ಸಾರ್ವಜನಿಕರ ಬಾವಿ ಕೆರೆಗಳಲ್ಲಿ ಹೂಳು ತುಂಬಿದ್ದು ಅದನ್ನು ತೆರವುಗೊಳಿಸಲು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅನುಷ್ಠಾನ ಗೊಳಿಸಲು ಅವಕಾಶ ನೀಡುವಂತೆ ಮುಖ್ಯ ಕಾರ್ಯ ನಿರ್ವಹಣಾ ಅದಿಕಾರಿ ದ. ಕ. ಜಿಲ್ಲಾ ಪಂಚಾಯತ್ ಮಂಗಳೂರು ಇವರ ಗಮನಕ್ಕೆ ತರಲು ನಿರ್ಣಯ ಮಾಡಲಾಯಿತು. ಸಂಪಾಜೆ ಗ್ರಾಮದ ಗೂನಡ್ಕ ಭಾಗದಲ್ಲಿ ನಿರಂತರ ರಾತ್ರಿ ವೇಳೆಯಲ್ಲಿ ವಿದ್ಯುತ್ ಕಡಿತ ಆಗುತ್ತಿದ್ದು ಈ. ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ರಾಜರಾಂಪುರ 33 ಕೆ. ವಿ. ಸಬ್ ಸ್ಟೇಷನ್ ಕಾಮಗಾರಿ ಅನುಷ್ಠಾನ ಮಾಡಲು ಮೆಸ್ಕಾಂ ಕಾರ್ಯಪಾಲಕ ಅಭಿಯಂತರರು ಪುತ್ತೂರು ಇವರಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಕುಡಿಯುವ ನೀರು ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲು ಪ್ರತಿಯೊಂದು ವಾರ್ಡ್ ಸದಸ್ಯರುಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಪ್ರತಿ ವಾರ್ಡ್ನ ಪಲಾನುಭವಿಗಳು ಹಾಗೂ ಆಯಾ ವಾರ್ಡ್ ಮಾಜಿ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಒಳಗೊಂಡ ಸಮಿತಿ ರಚಿಸಲಾಯಿತು. ಕುಡಿಯುವ ನೀರು ಬೇಡಿಕೆ ಸಲ್ಲಿಸುವ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಹಾಗೂ ಹಾಲಿ ಇರುವ ಎಲ್ಲಾ ಸಂಪರ್ಕಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಕೆ ತಕ್ಷಣ ವೆವಸ್ಥೆ. ಜೆ. ಜೆ. ಎಮ್. ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ಮೀಟರ್ ಅಳವಡಿಕೆ ಕಾರ್ಯ ಆರಂಭವಾಗಿದ್ದು ಪ್ರತಿ ಮನೆ ಬೇಡಿಕೆಯಂತೆ ಅನುಷ್ಠಾನ ಮಾಡಲು ತೀರ್ಮಾನಿಸಲಾಯಿತು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾಳಾದ ರಸ್ತೆಗಳ ಹಾಗೂ ಗ್ರಾಮ ಪಂಚಾಯತ್ ಕ್ರಿಯಾಯೋಜನೆಯಡಿ ಬಾಕಿ ಇರುವ ಸಂಪಾಜೆ ಪಂಚಾಯತ್ ವ್ಯಾಪ್ತಿಯ ಬಂಗ್ಲೆ ಗುಡ್ಡೆ ಕೈಪಡ್ಕ, ದಂಡೇಕಜೆ ಕಾಲನಿ ಹತ್ತಿರ, ಕಡೆಪಾಲ ಕುಯಿಂತೋಡು ರಸ್ತೆ, ಕಡೆಪಾಲ ಸಣ್ಣಮನೆ ಕಾಲನಿ ರಸ್ತೆ, ದೊಡ್ಡಡ್ಕ ರಸ್ತೆ crc ಕಾಲನಿ ರಸ್ತೆ, ದರ್ಕಾಸ್ ರಸ್ತೆಯಲ್ಲಿ ಕಾಂಕ್ರಿಟ್ ಚರಂಡಿ ರಚನೆ, ಕಲ್ಲುಗುಂಡಿ ನೆಲ್ಲಿಕುಮೆರಿ ರಸ್ತೆಯಲ್ಲಿ ವಿಷ್ಣು ಮೂರ್ತಿ ದೇವಸ್ಥಾನ ಬಳಿ ಒಳಚರಂಡಿ, ಗ್ರಾಮ ಪಂಚಾಯತ್ ಕಚೇರಿ ಬಳಿ ಚರಂಡಿ ರಾಜರಾಂಪುರ ಕಾಲನಿ ಒಳಗಡೆ ರಸ್ತೆ ಹಾಗೂ ಉದ್ಯೋಗ ಕಾತರಿ ಯೋಜನೆಯಡಿಯಲ್ಲಿ ಕೊರಂಬಡ್ಕ ರಸ್ತೆ ಕಾಂಕ್ರಿಟ್ ಮಾಡಲು ಅನುಮೋದನೆ ಮಾಡಲಾಯಿತು ಅಲ್ಲದೆ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾಳಾದ ಬಂಟೋಡಿ ರಸ್ತೆ ಚರಂಡಿ, ಆನೆಮಲ್ಲಡ್ಕ ರಸ್ತೆ ದುರಸ್ಥಿ, ಕಲ್ಲುಗುಂಡಿ ಸೊಸೈಟಿ ಬಳಿ ನವೀನ್ ರೈ ಮನೆ ಹತ್ತಿರ ಹಾದು ಹೋಗುವ ರಸ್ತೆ ದುರಸ್ಥಿ, ಪೆರುಂಗೋಡಿ ರಸ್ತೆ ದುರಸ್ಥಿ ಹಾಗೂ ದರ್ಕಾಸ್ ರಸ್ತೆಯಲ್ಲಿ ಚರಂಡಿ ದುರಸ್ಥಿಗೆ ಅನುದಾನ ಕ್ರಿಯಾಯೋಜನೆ ಮಾಡಲಾಯಿತು , ಸದಸ್ಯರು ಬೀದಿ ದೀಪ ದುರಸ್ಥಿ ಮಾಡಲು ಬೇಡಿಕೆ ಮಂಡಿಸಿದರು ಮಳೆ ಕಡಿಮೆಯಾದ ಕೂಡಲೇ ಮಾಡಲು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಪಂಪ್ ಆಪರೇಟರ್ ನವರಿಗೆ ಗೌರವಧನ ಹೆಚ್ಚಳ, ಪಂಚಾಯತ್ ಸಿಬ್ಬಂದಿ ಭರತ್ ಮುಂಬಡ್ತಿ, ಪಂಚಾಯತ್ ಸಿಬ್ಬಂದಿಗಳ ಮಾಸಿಕ ವೇತನ ಹೆಚ್ಚಳ, ಅನುಮೋದನೆ ಮಾಡಲಾಯಿತು. ಕಲ್ಲುಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಪಾಜೆ ಗ್ರಾಮಸ್ಥರಿಗೆ ಕಬಡ್ಡಿ ಪಂದ್ಯಾಟ ದಿನಾಂಕ 4.9.2022 ರಂದು ನಡೆಸಲು ತೀರ್ಮಾನಿಸಲಾಯಿತು ಪ್ರಥಮ ಬಹುಮಾನ 5000 ಶಾಶ್ವತ ಫಲಕ ದ್ವಿತೀಯ ಬಹುಮಾನ 3000 ಶಾಶ್ವತ ಫಲಕ ನೀಡಲು ತೀರ್ಮಾನಿಸಲಾಯಿತು ಹಾಗೂ ಸಾರ್ವಜನಿಕ ಸಂಘ ಸಂಸ್ಥೆಯ ಸಹಕಾರ ಪಡೆಯಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟ ಬಲಿಷ್ಠ ಮಾಡುವುಹುದು ಸಂಜೀವಿನಿ ಮೂಲಕ ಸರಕಾರದಿಂದ ಹೆಚ್ಚಿನ ಅನುದಾನ ಮಹಿಳೆಯರಿಗೆ ಬರುತಿದ್ದು ಮುಂದೆ ಸಂಜೀವಿನಿ ಒಕ್ಕೂಟದ ಮೂಲಕ ಸಿಗುವ ಸವಲತ್ತುಗಳು ಪಡಕೊಳ್ಳಲು ಮಹಿಳಾ ಸದಸ್ಯರು ಸಭೆಯಲ್ಲಿ ಪ್ರಸ್ತಾಪ ಮಾಡಿದರು ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ, ಜಗದೀಶ್ ರೈ, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ವಿಜಯ್ ಕುಮಾರ್, ಸವಾದ್ ಗೂನಡ್ಕ ಅನುಪಮಾ, ವಿಮಲಾ, ರಜನಿ ಶರತ್, ಸುಶೀಲ, ಉಪಸ್ಥಿತರಿದ್ದರು.