ಕೂತ್ಕುಂಜ: ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

0

 

 

ಶ್ರೀ ದುರ್ಗಾ ಮಹಿಳಾ ಮಂಡಲ ಕೂತ್ಕುಂಜ, ಧರ್ಮಶ್ರೀ ಮಹಿಳಾ ನವೋದಯ ಸ್ವಾಸಹಾಯ ಸಂಘ ಚಿದ್ಗಲ್, ಧನುಶ್ರೀ ಮಹಿಳಾ ಸ್ವಸಹಾಯ ಸಂಘ ಚಿದ್ಗಲ್, ದುರ್ಗಾಶ್ರೀ ಆತ್ಮರೈತ ಮಹಿಳಾ ಸಂಘ ಚಿದ್ಗಲ್ ಇವುಗಳ ಜಂಟಿ ಆಶಯದಲ್ಲಿ ಶ್ರೀಮತಿ ಚಂದ್ರಾವತಿ ಭಾಸ್ಕರ ಗೌಡ ಚಿದ್ಗಲ್ ರವರ ಮನೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸ್ವಾತಂತ್ರ್ಯ ನಡಿಗೆಯೊಂದಿಗೆ
ನಡೆಯಿತು.

ಇದೇ ಸಂದರ್ಭದಲ್ಲಿ ನಡೆದ ಆಟಿ ಉತ್ಸವ ಕಾರ್ಯಕ್ರಮವನ್ನು ಮಾಜಿ ಸೈನಿಕರಾದ ಮಾಧವ ಬಿಕೆ ಉದ್ಘಾಟಿಸಿ ಶುಭ ಹಾರೈಸಿದರು. ಪಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಧರ್ಮಶ್ರೀ ಮಹಿಳಾ ನವೋದಯ ಸ್ವಾಸಾಯ ಸಂಘ ಚಿದ್ಗಲ್, ದುರ್ಗಾಶ್ರೀ ಆತ್ಮರೈತ ಮಹಿಳಾ ಸಂಸ್ಥೆಗಳ ಅಧ್ಯಕ್ಷೆ ಮತ್ತು ವನಿತಾ ಸಮಾಜ ಪಂಜ ಇದರ ಪೂರ್ವಾಧ್ಯಕ್ಷೆ ಶ್ರೀಮತಿ ಚಂದ್ರಾಹೊನ್ನಪ್ಪ ಗೌಡ ಚಿದ್ಗಲ್, ಧನುಶ್ರೀ ನವೋದಯ ಸ್ವ ಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಹೇಮಾ ವಸಂತ್ ಚಿದ್ಗಲ್, ಶ್ರೀ ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲತಾ ದಿನೇಶ್, ಪಂಜ ಗ್ರಾ. ಪಂ. ಪೂರ್ವಾಧ್ಯಕ್ಷರಾದ ಕಾರ್ಯಪ್ಪ ಗೌಡ ಚಿದ್ಗಲ್ ವೇದಿಕೆಯಲ್ಲಿ ಉಪಸಿತರಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸೈನಿಕ ಬಿ.ಕೆ ಮಾಧವ ಗೌಡ ಬೇರ್ಯ ದಂಪತಿಗಳನ್ನು ಮತ್ತು ಕೆಇಬಿ ಲೈನ್ ಮ್ಯಾನ್ ಸದಾಶಿವ ಸಂಪ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆಟಿ ಉತ್ಸವದಲ್ಲಿ ಆಟಿ ತಿಂಗಳಲ್ಲಿ ಮಾಡುವ ವಿಶೇಷ ಖಾದ್ಯಗಳ ಸ್ಪರ್ಧೆ, ಚೆನ್ನೆಮಣೆ, ದೇಶಭಕ್ತಿಗೀತೆ, ಶೋಭಾನೆ ಹಾಡುವುದು ಅದೃಷ್ಟ ಚೀಟಿ ಸ್ಪರ್ಧೆಗಳು ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಮಾರಿ ರಚನಾ ಚಿದ್ಗಲ್ ಪ್ರಾರ್ಥಿಸಿದರು. ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ಸ್ವಾಗತಿಸಿ ಶ್ರೀಮತಿ ಲತಾ ದಿನೇಶ್ ಚಿದ್ಗಲ್ ವಂದಿಸಿದರು. ವಿಮಲಾ ಮತ್ತು ಶ್ರೀಮತಿ ಹೇಮಾ ವಸಂತ್ ಚಿದ್ಗಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಹಭಾಗಿತ್ವ ನೀಡಿದ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವು‌ ಮಂದಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.