ಅರಂತೋಡಿನಲ್ಲಿ ಮಿಥಿಲಾ ಟ್ರೇಡರ್ಸ್ ಶುಭಾರಂಭ

0

 

ಅರಂತೋಡು ಎಂ.ಎಂ.ರಸ್ತೆಯ ಗಿರಿಜಾ ವಾಣಿಜ್ಯ ಸಂಕೀರ್ಣದಲ್ಲಿ ಕೃಪಾ ಭೂತಕಲ್ಲು ರವರ ಮಾಲಕತ್ವದ ಮಿಥಿಲಾ ಟ್ರೇಡರ್ಸ್ ಆ.24 ರಂದು ಶುಭಾರಂಭಗೊಂಡಿತು. ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಯವರು ದೀಪ ಬೆಳಗಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ,ಕಾಂಪ್ಲೆಕ್ಸ್ ಮಾಲಕ ನಿವೃತ್ತ ಶಿಕ್ಷಕ ಜತ್ತಪ್ಪ ಗೌಡ, ಸೊಸೈಟಿ ನಿರ್ದೇಶಕ ವಿನೋದ್ ಉಳುವಾರು, ಆಲೆಟ್ಟಿ ಪಂ.ಸದಸ್ಯ ಚಂದ್ರಕಾಂತ ನಾರ್ಕೋಡು, ನಾರಾಯಣ ಗೌಡ ನಾರ್ಕೋಡು, ಗಿರೀಶ್ ಅಳಿಕೆ,ಆನಂದ ಗೌಡ ಕೊಡಪಾಲ, ವೆಂಕಟ್ರಮಣ ಭೂತಕಲ್ಲು, ಗುರುಪ್ರಸಾದ್ ಪರ್ನೋಜಿ ಹಾಗೂ ಮಾಲಕರ ಬಂಧು ಮಿತ್ರರು ಉಪಸ್ಥಿತರಿದ್ದರು. ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ,ಮಾಲಕರ ತಂದೆ ಯತಿರಾಜ್ ಭೂತಕಲ್ಲು, ತಾಯಿ ಶ್ರೀಮತಿ ಪ್ರಮೀಳಾ ಯತಿರಾಜ್ ಭೂತಕಲ್ಲು, ಸಹೋದರಿ ಜಾಹ್ನವಿ ಪವನ್ ಎಲ್ಲರನ್ನೂ ಸ್ವಾಗತಿಸಿದರು. ಕೌಶಿಕ್ ಕೊಡಪಾಲ ವಂದಿಸಿದರು. ನೂತನವಾಗಿ ತೆರೆದ ವ್ಯಾಪಾರ ಮಳಿಗೆಯಲ್ಲಿ
ತೆಂಗಿನಕಾಯಿ, ಅಡಿಕೆ,ಬಾಳೆಗೊನೆ, ಕೊಕೊ, ಗೇರುಬೀಜ, ಕಾಳುಮೆಣಸು ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದರು.