ತೊಡಿಕಾನ : ಲಕ್ಷ ತುಳಸಿ ಅರ್ಚನೆ ಆಮಂತ್ರಣ ಪತ್ರ ಬಿಡುಗಡೆ

0

 

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಸೆ. 18 ರಂದು ಮಲ್ಲಿಕಾರ್ಜುನ ಭಜನಾ ಸಂಘದ ನೇತೃತ್ವದಲ್ಲಿ ಶ್ರೀ ವಿಷ್ಣು ದೇವರಿಗೆ ಲಕ್ಷ ತುಳಸಿ ಅರ್ಚನೆ ಹಾಗೂ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಆ. 27 ರಂದು ದೇವಾಲಯದ ಅಕ್ಷಯ ಸಭಾಭವನದಲ್ಲಿ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಕಿಶೋರ್ ಕುಮಾರ್ ಉಳುವಾರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಭಜನಾ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ , ಕಾರ್ಯದರ್ಶಿ ಸುರೇಶ್ ಡಿ. ಎ , ಶಿವಶಂಕರಿ ಭಜನಾ ಮಂಡಳಿ ಅಧ್ಯಕ್ಷೆ ಚಂದ್ರಕಲಾ ಕುತ್ತಮೊಟ್ಟೆ , ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ , ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರಂತೋಡು ಗ್ರಾ.ಪಂ ಸದಸ್ಯರುಗಳು, ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರು, ಮಾಜಿ ಎಪಿಎಂಸಿ ಅಧ್ಯಕ್ಷರು, ತಾ.ಪಂ ಉಪಾಧ್ಯಕ್ಷರು, ಅರಂತೋಡು ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರು, ಮಾಜಿ ಗ್ರಾ.ಪಂ ಸದಸ್ಯರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ನೋದ್ಧಾರ ಸದಸ್ಯರು, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಜನಾ ಸಂಘದ ಪದಾಧಿಕಾರಿಗಳು, ತೊಡಿಕಾನ ದೇವಸ್ಥಾನದ ಮೇನಜರ್ ಮತ್ತು ಸಿಬ್ಬಂದಿ ವರ್ಗ ಮತ್ತು ಭಕ್ತಾಭಿಮಾನಿಗಳು ಭಾಗವಹಿಸಿದರು.

ಲಕ್ಷ ತುಳಸಿ ಅರ್ಚನೆ ಪ್ರಯುಕ್ತ ತೊಡಿಕಾನ ಸೀಮೆಯ 18 ಗ್ರಾಮಗಳ ಭಜನಾ ಸಂಘಗಳು ಮತ್ತು ಆ ಗ್ರಾಮದ ಪ್ರಮುಖರನ್ನು ಸೇರಿಸಿ ಸಮಿತಿ ರಚಿಸುವುದು , ಸೀಮೆಯ ಪ್ರತಿ ಮನೆಯಿಂದಲೂ ತುಳಸಿ ಸಂಗ್ರಹಿಸುವುದು, ಪೂಜೆಗೆ ಕನಿಷ್ಠ 100 ದಂಪತಿಗಳು ವೃತದಾರಿಗಳಾಗಿ ಭಾಗವಹಿಸುವುದು , ಸೀಮೆಯ ಪ್ರತಿ ಮನೆಗೂ ಆಮಂತ್ರಣ ತಲುಪಿಸುವ ಕುರಿತು ಚರ್ಚಿಸಲಾಯಿತು. ಮಲ್ಲಿಕಾರ್ಜುನ ಭಜನಾ ಸಂಘದ ಸದಸ್ಯರು ಹಾಜರಿದ್ದರು.