ಪೆರಾಜೆ ಶಾಸ್ತಾವು ಕ್ಷೇತ್ರದಲ್ಲಿ ವಿಶೇಷ ಶನಿಪೂಜೆ ಹಾಗೂ ಸೋಣ ಶನಿವಾರ

0

 

ನೂರಾರು ಭಕ್ತರು ಭಾಗಿ

ಪೆರಾಜೆ‌ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಶ್ರಾವಣ ಶನಿವಾರದ ವೃತಾಚರಣೆ ಹಾಗೂ ವಿಶೇಷ ಶನಿಪೂಜೆ ಆ.27 ರಂದು ನಡೆಯಿತು.

ಶನಿಪೂಜೆಗೆ ಬೆಳಗ್ಗೆ ಹಾಗೂ ಮಧ್ಯಾಹ್ನ ಹಾಗೂ ಸೋಣ ಶನಿವಾರ ವೃತಾಚರಣೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಆ.27 ರಂದು ಸೋಣ ಶನಿವಾರದ ಬೆಳಗ್ಗಿನ ಉಪಾಹಾರಕ್ಕೆ ದಾನಿಗಳಾಗಿ ಉಜ್ವಲ್ ಊರುಬೈಲುರವರ ಮಗ ಉತ್ಸವ್ ಹಾಗೂ ಆ.20 ರಂದು ಮೊದಲ ಶ್ರಾವಣ ಶನಿವಾರದಂದು ಉಪಹಾರದ ವ್ಯವಸ್ಥೆ ಕಲ್ಪಿಸಿದ ಸುಳ್ಯದ ಎಸ್.ಬಿ. ಲ್ಯಾಬ್ ಮಾಲಕ ಬಾಲಕೃಷ್ಣ ಎಂ ಸಹಕಾರ ನೀಡಿದರು. ದಾನಿಗಳಿಗೆ ದೇವಸ್ಥಾನದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.

 

ಕ್ಷೇತ್ರದಲ್ಲಿ ಪ್ರತೀ ದಿನವೂ ಶನಿಪೂಜೆ ನಡೆಯುತ್ತಿದೆ. ಶನಿವಾರದಲ್ಲಿ ನೂರಾರು ಭಕ್ತರು ಆಗಮಿಸುವುದರಿಂದ ಆ ದಿನ ಉಪಹಾರದ ವ್ಯವಸ್ಥೆ ಮಾಡಲು ಎಲ್ಲ ಸಮಿತಿಯವರಿದ್ದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎ. ಜಿತೇಂದ್ರ ರು‌ ತಿಳಿಸಿದ್ದಾರೆ.

 

ಆ.27 ರಂದು ಕ್ಷೇತ್ರದಲ್ಲಿ ‘ಜಾಬಾಲಿ ನಂದಿನಿ’ ಯಕ್ಷಗಾನ ತಾಳಮದ್ದಳೆ ಯು ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.