ಅತಿವೃಷ್ಟಿಯಿಂದ ಹೊಳೆಯಲ್ಲಿ ತುಂಬಿರುವ ಮರಳು ಮತ್ತು ಹೂಳು ಎತ್ತುವ ಬಗ್ಗೆ ಸಂಪಾಜೆ ಕಲ್ಲುಗುಂಡಿ ನಿವಾಸಿಗಳಿಂದ ಸಚಿವರಿಗೆ ಮನವಿ

0

 

 

ಸಂಪಾಜೆ ಗ್ರಾಮದ ನಿವಾಸಿಗಳು ಹೊಳೆಯ ಬದಿಯಲ್ಲಿ ಕೃಷಿ ಮಾಡಿಕೊಂಡು ಸುಮಾರು ೫೦ ವರ್ಷಗಳಿಂದಲೂ ವಾಸಿಸಿಕೊಂಡು ಬಂದಿದ್ದು. ಸತತವಾಗಿ ೪ ದಿನ ಸುರಿದ ಮಳೆಯಿಂದ ನಮ್ಮ ಮನೆಗಳು ಕೃಷಿ ಭೂಮಿಗಳು ನೆರೆ ನೀರು ಉಕ್ಕಿಬಂದು ಹಾನಿಯಾಗಿರುತ್ತದೆ.

ಇದಕ್ಕೆ ನದಿಯಲ್ಲಿ ಮರಳು ಮತ್ತು ಹೂಳು ತುಂಬಿ ನೀರು ಸರಿಯಾದ ದಿಕ್ಕಿನಲ್ಲಿ ಹರಿಯದೆ ಇರುವುದೇ ಕಾರಣ. ಸಂಪಾಜೆ ಗೇಟು ಬಳಿಯಿಂದ ಹರಿಯುವ ಹೊಳೆಯು ಅರೆಕಲ್ಲು ಕುಂಟಿಕಾನದಿಂದ ಬರುವ ನೀರು ಈ ಹೊಳಗೆ ಸೇರಿಕೊಂಡು ಸಂಪಾಜೆ, ಕೈಪಡ್ಕ ಮೂಲಕ ಹಾದು ಒತ್ತೆಕೋಲ ಗದ್ದೆ ಸಮೀಪ ಹರಿದು ಕಲ್ಲುಗುಂಡಿಗೆ ಸೇರಿಕೊಳ್ಳುತ್ತದೆ. ಅಲ್ಲದೆ ಕೆಲವು ತೋಡುಗಳು ಇದಕ್ಕೆ ಸೇರುತ್ತವೆ. ಮೊಣ್ಣಂಗೇರಿ, ಜೋಡುಪಾಲ, ಮದೆನಾಡು ಕಡೆಯ ಗುಡ್ಡ ಜರಿದು ಮರಳು ಮತ್ತು ಹೂಳು ತುಂಬಿರುತ್ತದೆ ಅಲ್ಲದೆ ಮರ, ಬಿದಿರು ,ಕಸ ಕಡ್ಡಿ, ಹೊಳೆಯ ಇಕ್ಕೆಲಗಳಲ್ಲಿ ತುಂಬಿ ಕಳೆದ ಬಾರಿ ಸತತವಾಗಿ ೩ ದಿನ ಮಳೆ ಸುರಿದು ಹೆದ್ದಾರಿಗೆ ನೀರು ಬಂದು ಮನೆ, ಕೃಷಿಯು ಸಂಪೂರ್ಣ ನಾಶವಾಗಿರುತ್ತದೆ. ಅದ್ದರಿಂದ ಮರಳು ಮತ್ತು ಹೂಳು ಎತ್ತುವ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಮಾಡಿ ಮುಂದೆ ನರೆಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಬೇಕೆಂದು ನಾಗರೀಕರು ಮನವಿ ಮಾಡಿರುತ್ತಾರೆ.