ಕಸದ ತೊಟ್ಟಿಯಾಗುತ್ತಿರುವ ಕೊಯನಾಡು ಬಸ್ ಸ್ಟ್ಯಾಂಡ್

0

 

ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಪ್ರಯಾಣಿಕರ ಅನುಕೂಲಕ್ಕೆಂದು ನಿರ್ಮಿಸಿರುವ ಪುರಾತನ ಬಸ್ಸುತಂಗುದಾಣ ಕಸ ಕಡ್ಡಿ,ವ್ಯಸನದ ಪ್ಯಾಕೆಟ್ ಗಳಿಂದ ಕಸದ ತೊಟ್ಟಿಯಾಗಿದೆ. ದಿನಂಪ್ರತಿ ನೂರಾರು ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳು , ಸಾರ್ವಜನಿಕರು ಬಿಸಿಲು, ಮಳೆಗೆ ನಿಲ್ಲುವ ಪರಿಸ್ಥಿತಿ ಬಂದಿದೆ.


ಸಂಪಾಜೆ ಗ್ರಾಮ ಪಂಚಾಯತ್ ಹೆಸರಿನ ನಾಮಫಲಕವು ಮೂಲೆಯಲ್ಲಿ ಬಿದ್ದಿದ್ದು, ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸಾರ್ವಜನಿಕರ ಗೋಳನ್ನು ಕಾಣದಾಗಿದೆ.

 

ಕೂಡಲೇ ಸಂಬಂಧಪಟ್ಟವರು ಈ ತಂಗುದಾಣ ವನ್ನು ಸರಿಪಡಿಸಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಕೊಡಬೇಕಾಗಿ ಆ ಭಾಗದ ಜನರು ಆಗ್ರಹಿಸುತ್ತಿದ್ದಾರೆ.