ಬಳ್ಪ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

 

ಬಳ್ಪ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಬ್ರಹ್ಮಣ್ಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆ.26 ರಂದು ನಡೆಯಿತು.

ಸಭಾ ಕಾರ್ಯಕ್ರಮವನ್ನು ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಚೂಂತಾರು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ”ಮಕ್ಕಳು ಸರ್ವತೋಮುಖ ಅಭಿವೃದ್ಧಿಗೆ ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅತ್ಯಗತ್ಯ ಮಕ್ಕಳ ಪ್ರತಿಭೆಯನ್ನು ಗುರತಿಸಿ ಹೊರತರಲು ಕಾರ್ಯಕ್ರಮಗಳು ನಡೆಯಬೇಕು” ಎಂದು ಹೇಳಿದರು., ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಬುಡೆಂಗಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾಕುಮಾರಿ ಪ್ರಾಸ್ತಾವಿಕ ಗೈದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಭವ್ಯ , ಶಿಕ್ಷಣ ಸಂಯೋಜಕ ವಸಂತ ಏನೇಕಲ್ಲು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಕೆ, ಪಂಚಾಯತ್ ಸದಸ್ಯೆ ಶ್ರೀಮತಿ ಶೈಲಜಾ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಬ್ರಹ್ಮಣ್ಯ, ಶಿಕ್ಷಕ ಸಂಘದ ಪ್ರತಿನಿಧಿಗಳಾದ ಶ್ರೀಮತಿ ಅಂಬಿಕಾ ಹಾಗೂ ಶ್ರೀಮತಿ ಸರೋಜಿನಿ, ಉಪಸ್ಥಿತರಿದ್ದರು.

ವಿವಿಧ ಶಾಲೆಗಳ ಮಕ್ಕಳು , ಪೋಷಕರು ಹಾಗೂ ಶಿಕ್ಷಕರು ಹಾಜರಿದ್ದರು, ಕಾರ್ಯಕ್ರಮದ ವ್ಯವಸ್ಥೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್.ಪಿ‌ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ ವೀಕ್ಷಿಸಿದರು. ಹಿರಿಯ ಹಾಗೂ ಕಿರಿಯ ವಿಭಾಗದಿಂದ ಒಟ್ಟು 27 ವಿಭಾಗದಲ್ಲಿ ಸ್ಪರ್ಧೆ ಗಳು ನಡೆದವು ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು, ಶಾಲಾ ಶಿಕ್ಷಕ ಆನಂದ ವೈ ನಿರೂಪಿಸಿದರು , ಶ್ರೀಮತಿ ಗಿರಿಜಾ ಕೆ ಸ್ವಾಗತಿಸಿದರು , ಶ್ರೀಮತಿ ಭಾಗೀರಥಿ ಮತ್ತು ಶ್ರೀಮತಿ ಗುಲಾಬಿ ಎ ವಂದಿಸಿದರು ‌ಶ್ರೀಮತಿ ಲೋಲಾಕ್ಷಿ ಉಧ್ಘೋಷಕರಾಗಿ, ಶ್ರೀಮತಿ ಹರ್ಷಿತ ದಾಖಲೆ ವಿಭಾಗ ನಿರ್ವಹಿಸಿದರು, ಗ್ರಾಮದ ಎಲ್ಲಾ ಸಂಘಸಂಸ್ಥೆಗಳು, ಹಾಗೂ ಸ್ವಯಂ ಸೇವಕರು, ಧಾನಿಗಳು, ಪೋಷಕರು ಸಹಕರಿಸಿದರು.
ಶಾಲೆಗೆ ಉತ್ತಮ ಸಂಘಟನೆಗಾಗಿ ಇಲಾಖೆವತಿಯಿಂದ ಅಭಿನಾಂದನಾ ಪತ್ರ ನೀಡಿ ಗೌರವಿಸಲಾಯಿತು.