ಸರಕಾರಿ ಪ್ರೌಢಶಾಲೆ ಎಲಿಮಲೆ ನೂತನ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ

0

ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ 2022-23 ನೇ ಸಾಲಿನ ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು (ಆ.27) ನಡೆಯಿತು. ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಕೀರ್ತನ ಡಿ. ಇವನಿಗೆ ಗ್ಯಾವಲ್ ನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿದರು. ಬಳಿಕ ಮಾತನಾಡಿದ ಅವರು ” ವಿದ್ಯಾರ್ಥಿಗಳು ಇಂಟ್ರಾಕ್ಟ್ ಕ್ಲಬ್ ನಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಭಾವನೆಯನ್ನು ಬೆಳೆಸಿಕೊಂಡು, ಕೈಲಾದ ಕೊಡುಗೆಯನ್ನು ನೀಡುವಂತಾಗಬೇಕು. ಕ್ಲಬ್ ನ ಆಶ್ರಯದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಾಯಕತ್ವ ಗುಣ ರೂಡಿಸಿಕೊಳ್ಳುವುದರೊಂದಿಗೆ ಸ್ವಯಂ ಬೆಳವಣಿಗೆಗೆ ಅವಕಾಶವಿದೆ. ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ,ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡು, ಎಲ್ಲರಿಂದ ಗುರುತಿಸುವಂತಾಗಬೇಕು ಮತ್ತು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಳ್ಯ ರೋಟರಿ ಕ್ಲಬ್‌ ನ ಇಂಟರಾಕ್ಟ್ ಚಯರ್ ಮೆನ್ ರೋ| ದಯಾನಂದ ಆಳ್ವ ಇವರು ” ದೇಶ ಹಾಗೂ ಸಮಾಜಕ್ಕಾಗಿ ಸೇವೆ ಸಲ್ಲಿಸಿರುವ ರೋಟರಿ ಸಂಸ್ಥೆ ಪಲ್ಸ್ ಪೋಲಿಯೊ ನಿರ್ಮೂಲನಾ ಕಾರ್ಯಕ್ರಮದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಪ್ರಸ್ತುತ ವೃತ್ತಿ ತರಬೇತಿ, ಜಾಗತಿಕ ಶಾಂತಿ ಹಾಗೂ ಮನುಕುಲದ ಸೇವೆ ಗಾಗಿ ದುಡಿಯುತ್ತಿದೆ” ಎಂದರು. ಇಂಟರಾಕ್ಟ್ ಕ್ಲಬ್ ನ ನಿರ್ದೇಶಕರಾದ ಸಂಧ್ಯಾ ಕೆ. ಇವರು ಸ್ವಾಗತಿಸಿ, ಕ್ಲಬ್ ನ ಶಿಕ್ಷಕ ಸಮನ್ವಯಾಧಿಕಾರಿಗಳಾದ ವಸಂತ ನಾಯಕ್ ಡಿ. ಇವರು ವಂದಿಸಿದರು. ಶಿಕ್ಷಕ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು .

ಇಂಟರಾಕ್ಟ್ ಕ್ಲಬ್ ನೂತನ ಅಧ್ಯಕ್ಷನಾಗಿ ಕೀರ್ತನ್ ಡಿ. ಕಾರ್ಯದರ್ಶಿಯಾಗಿ ಕೃತಿ ಎ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾವನಾ ಕೆ , ರಾಧಿಕಾ ಕೆ, ಕೌಶಿಕ್ ಕೆ, ದಿಶಾ ಕೆ, ರಾಧಿಕಾ ವೈ, ಶ್ರಾವ್ಯ ಶ್ರೀ ಎಸ್, ಫಾತಿಮತ್ ಸನ ಐ, ಚೇತನ್ ಕೆ. ಅಧಿಕಾರ ವಹಿಸಿದರು.